– ಆಂಧ್ರದಿಂದ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಂತೆ ರಾಜ್ಯ ನಾಯಕರ ಮೂಲಕ ಸಂದೇಶ
ಬಳ್ಳಾರಿ: ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡರೋ ಶ್ರೀರಾಮುಲು ಅವರನ್ನ ಸಮಾಧಾನ ಮಾಡಲು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಶ್ರೀರಾಮುಲು (Sriramulu) ಇದೀಗ ಹೊಸ ವರಸೆ ಶುರು ಮಾಡಿದ್ದು, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎಷ್ಟೇ ಕರೆ ಮಾಡಿ ಕರೆದರೂ ಪಕ್ಷದ ನಾಯಕರಿಂದ ಶ್ರೀರಾಮುಲು ದೂರವೇ ಉಳಿಯುತ್ತಿದ್ದಾರೆ. ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೇ ಇಲ್ಲ, ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಸೋತಿರೋ ಶ್ರೀರಾಮುಲು, ಜೆ.ಪಿ ನಡ್ಡಾ (JP Nadda), ಅಮಿತ್ ಶಾ (Amit Shah) ದೆಹಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆ ದೆಹಲಿ ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್ ಥ್ಯಾಂಕ್ಸ್
ಅಸ್ತಿತ್ವದ ಪ್ರಶ್ನೆ ಹಾಗೂ ಅಸ್ತಿತ್ವದ ಉಳಿವಿನ ಹೊರಾಟದಲ್ಲಿರುವ ರಾಮುಲುರಿಂದ ರಾಜ್ಯ ಸಭಾಸದಸ್ಯರನ್ನಾಗಿ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು, ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಬೇಡಿಕೆ ಇಡಲಿದ್ದಾರೆ. ಮೊನ್ನೆ ಆಂಧ್ರದ ರಾಜ್ಯಸಭೆ ಸದಸ್ಯ ವೈಎಸ್ಆರ್‌ಪಿ ಪಕ್ಷದ ವಿಜಯ ಸಾಯಿರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: Economic Survey 2025| ಜಿಡಿಪಿ 6.3-6.8% ನಿರೀಕ್ಷೆ – ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ? ಯಾವ ವಲಯದ ಸಾಧನೆ ಎಷ್ಟಿದೆ?
ವಿಜಯ ಸಾಯಿ ರೆಡ್ಡಿಯವರ 4 ವರ್ಷದ ಅವಧಿ ಇನ್ನೂ ಬಾಕಿ ಇರೋ ಹಿನ್ನೆಲೆ ಆಂಧ್ರ ಕೋಟಾದಡಿ ರಾಜ್ಯಸಭೆ ಮಾಡುವಂತೆ ಮನವಿ ಮಾಡಲಿದ್ದಾರಂತೆ. ಈ ಬಗ್ಗೆ ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ನೀಡಿರುವ ರಾಮುಲು, ದೆಹಲಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: Maha Kumbh Mela| ಸನ್ಯಾಸಿನಿಯಾಗಲು ಹೊರಟ ಮಮತಾ ಕುಲಕರ್ಣಿ ಅಖಾಡದಿಂದಲೇ ಔಟ್