DistrictsKarnatakaLatestMain PostMandya

ಮನೆ ಖಾಲಿ ಮಾಡೋ ವಿಚಾರದಲ್ಲಿ ಸುಳ್ಳು ಹೇಳಿದ್ರಾ ರಮ್ಯಾ?

ಮಂಡ್ಯ: ಇಲ್ಲಿನ ವಿದ್ಯಾನಗರದಲ್ಲಿದ್ದ ಬಾಡಿಗೆ ಮನೆ ಖಾಲಿ ಮಾಡುವ ವಿಚಾರದಲ್ಲಿ ಮಾಜಿ ಸಂಸದೆ ರಮ್ಯಾ ಅವರು ಸುಳ್ಳು ಹೇಳಿದ್ರಾ ಅನ್ನೋ ಅನುಮಾನ ಪ್ರಶ್ನೆ ಎದ್ದಿದೆ.

ಮಾಲೀಕ ಮನೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನಾನು ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದೇನೆ ಅಂತ ರಮ್ಯಾ ಹೇಳಿದ್ದು, ಇದೀಗ ಸ್ವತಃ ಮಾಲೀಕರೇ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ.

MND RAMYA HOUSE 3

ರಮ್ಯಾ ಮನೆ ಖಾಲಿ ಮಾಡುವುದಾಗಿ ಅವರ ಪಿಎ ಎರಡು ತಿಂಗಳ ಹಿಂದೆ ಕರೆ ಮಾಡಿ ಹೇಳಿದ್ದರು. ಆದ್ರೆ ಈಗ ಮನೆ ಖಾಲಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸೋಮವಾರ ಬೆಳಗ್ಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಸುದ್ದಿ ನೋಡಿದ ನಂತರ ರಮ್ಯಾ ಮನೆ ಖಾಲಿ ಮಾಡಿದ್ದು ಗೊತ್ತಾಗಿದೆ. ಮನೆಯಲ್ಲಿದ್ದ ಫರ್ನಿಚರ್ ತೆಗೆದುಕೊಂಡು ಹೋಗುತ್ತೇನೆ ಅಂದ್ರು. ಓಕೆ ತೆಗೆದುಕೊಂಡು ಹೋಗಿ ಇಲ್ಲ ಅಂದ್ರೆ ನಾನೇ ಕಳಿಸಿಕೊಡುತ್ತೇನೆ. ಆದ್ರೆ ಮನೆ ಖಾಲಿ ಮಾಡುವ ಬಗ್ಗೆ ಬರಹದಲ್ಲಿ ಕೊಡಿ ಎಂದು ಕೇಳಿದ್ದೆ. ಆದ್ರೆ ಇದುವರೆಗೂ ಬರಹದಲ್ಲಿ ಕೊಟ್ಟಿಲ್ಲ. ಅವರು ಸಿಗೋದೇ ಇಲ್ಲ. ಹೀಗಾಗಿ ಮನೆಯ ವಸ್ತುಗಳನ್ನು ಎಲ್ಲಿ ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ ಅಂತ ರಮ್ಯಾ ಅವರ ಬಾಡಿಗೆ ಮನೆ ಮಾಲೀಕ ಸಾದತ್ ಆಲಿಖಾನ್ ಹೇಳಿದ್ದಾರೆ.

MND RAMYA HOUSE 2

ಅವರು ಮನೆ ಖಾಲಿ ಮಾಡಿದ್ದಾರೆ ಎಂದು ಗೊತ್ತಾದ ನಂತರ ವಿಚಾರಿಸಿದೆ. ಇನ್ನೂ ಮನೆ ಬಳಿ ಸೆಕ್ಯೂರಿಟಿ ಇರುವುದು ಗೊತ್ತಾಗಿದೆ. ಮನೆ ಬಳಕೆಯಾಗಲಿ ಎಂದು ರಮ್ಯಾ ಅವರಿಗೆ ಕೊಟ್ಟಿದ್ದೆ. ಆದ್ರೆ ಮನೆಗೆ ಅವರು ಬರುತ್ತಲೇ ಇಲ್ಲ. ಮನೆಗೆ ಸೆಕ್ಯೂರಿಟಿ ಇಟ್ಟಿದ್ರು. ಹೀಗಾಗಿ ಮನೆ ನಿಮಗೆ ಬೇಡ ಅಂದ್ರೆ ನಾವೇ ಇರುತ್ತೇವೆ ಕೊಡಿ ಎಂದು ಕೇಳಿದ್ದೆ. ಆದ್ರೆ ನಾನು ಹಾಗೇ ಕೇಳುವ ಮುಂಚೆಯೇ ಅವರು ಖಾಲಿ ಮಾಡುತ್ತೇವೆ ಅಂದಿದ್ರು. ಹೀಗಾಗಿ ಖಾಲಿ ಮಾಡಿರಬಹುದು ಎಂದು ತಿಳಿಸಿದರು.

ರಮ್ಯಾ ಅವರು ಅಂಬರೀಶ್ ಅಂತ್ಯ ಸಂಸ್ಕಾರಕ್ಕಾದ್ರೂ ಬರಬೇಕಿತ್ತು. ಅವರಿಗೆ ಹುಷಾರಿಲ್ಲದ ಕಾರಣ ಬಂದಿಲ್ಲದಿರಬಹುದು. ಅವರು ಚುನಾವಣೆಗೆ ನಿಂತು ಇಲ್ಲಿಯೇ ಇರುತ್ತಾರೆ ಎಂದುಕೊಂಡಿದ್ದೆ. ಆದ್ರೆ ಅವರು ಚುನಾವಣೆಗೆ ನಿಲ್ಲಲಿಲ್ಲ. ಅವರಿಗೆ ಹುಷಾರಿಲ್ಲ ಎಂದು ಯಾರೋ ಹೇಳಿದ್ರು. ಆದ್ರೆ ಅವರಿಗೆ ಏನಾಗಿದೆ ಎಂಬ ಸತ್ಯ ನನಗೆ ಗೊತ್ತಿಲ್ಲ. ಅವರು ಸಿಗ್ತಾನೆ ಇಲ್ಲ. ನನಗೆ ಆ ಮನೆಯ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಆ ಮನೆಯನ್ನು ನಾನು ಯಾರಿಗೂ ಮಾರಲ್ಲ. ಮೊದಲು ಆ ಮನೆಗೆ ಅಂಬರೀಶ್ ಬಾಡಿಗೆಗೆ ಬರುತ್ತಾರೆ ಎಂದು ಅವರ ಅಭಿಮಾನಿಗಳು ಹೇಳಿದ್ರು. ಅವರು ಬರಲಿಲ್ಲ. ಆ ನಂತ್ರ ರಮ್ಯಾ ಬಾಡಿಗೆಗೆ ಬಂದ್ರು ಅಂತ ಅವರು ವಿವರಿಸಿದ್ರು.

MND RAMYA HOUSE 1

ರಮ್ಯಾ ಹೇಳಿದ್ದು ಏನು?
ರಾತ್ರೋರಾತ್ರಿ ನಾನು ನಿವಾಸವನ್ನು ಖಾಲಿ ಮಾಡಿಲ್ಲ. ಮಂಡ್ಯದಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೆ. ಕೆಲ ದಿನಗಳ ಹಿಂದೆ ಮನೆ ಮಾಲೀಕ ನಾನು ಮರಳುತ್ತಿದ್ದೇನೆ. ಹೀಗಾಗಿ ನನಗೆ ಆ ಮನೆ ಬೇಕೆಂದು ಹೇಳಿದರು. ಜವಾಬ್ದಾರಿಯುತ ಬಾಡಿಗೆದಾರಳಾಗಿ ಮಾಲೀಕನ ಮಾತನ್ನು ಕೇಳಬೇಕಾದದ್ದು ನನ್ನ ಕರ್ತವ್ಯ. ಹೀಗಾಗಿ ನಾನು ಮನೆಯನ್ನು ಖಾಲಿ ಮಾಡಿದ್ದೇನೆ ಎಂದು ರಮ್ಯಾ ಪ್ರತಿಕ್ರಿಯಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *