ಕಳೆದೊಂದು ವಾರದಿಂದ ಭಾರೀ ಚರ್ಚೆಯಲ್ಲಿದ್ದ ಬಿಗ್‌ಬಾಸ್ ಮನೆಯ ವಿಚಾರ ಅಂದ್ರೆ ಅದು ಸ್ಪರ್ಧಿಗಳಾದ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಜಗಳ. ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಚಪ್ಪಲಿ ತೋರಿಸಿದ್ರು, ಕಲಾವಿದರಿಗೆ ಅವಮಾನ ಮಾಡಿದ್ರು ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ಹಲವರಿಗೆ ಗೊಂದಲ ಇದೆ. ಅಸಲಿಗೆ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದನ್ನ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಸ್ವತಃ ಓರ್ವ ಕಲಾವಿದರಾಗಿ ಅದನ್ನ ಒಪ್ಪಿಕೊಳ್ತಾರಾ? ರಕ್ಷಿತಾ ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಅಶ್ವಿನಿಗೌಡ ಅವರಿಗೆ ಚಪ್ಪಲಿ ತೋರಿಸಿದ್ದು ನಿಜವಾ? ಇದೆಲ್ಲದರ ಕುರಿತು ಈ ವಾರ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆ ಕುರಿತು ಪ್ರೋಮೋ ರಿಲೀಸ್ ಆಗಿದೆ.
ರಕ್ಷಿತಾ ಮೇಲೆ ಅಶ್ವಿನಿ ಗೌಡ ಆರೋಪಗಳ ಸುರಿಮಳೆಗೈದಿದ್ದರು. ಆದರೆ ಈ ಬಗ್ಗೆ ಮನೆಯಲ್ಲೇ ವಿರೋಧವಿದ್ದು ಕೆಲವು ಸ್ಪರ್ಧಿಗಳು ರಕ್ಷಿತಾ ಉದ್ದೇಶ ಕಲಾವಿದರಿಗೆ ಅವಮಾನ ಮಾಡುವುದಲ್ಲ, ಕೇವಲ ಅಶ್ವಿನಿ ಗೌಡ ಜೊತೆ ಮಾತ್ರ ರಕ್ಷಿತಾ ಅಸಮಾಧಾನವಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದರು. ಅದಕ್ಕೆಲ್ಲ ಸ್ಪಷ್ಟೀಕರಣ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಸಿಗಲಿದೆ.
ಅಶ್ವಿನಿ ಗೌಡ ಹಾಗೂ ಸುದೀಪ್ ನಡುವೆ ಬಿರುಸಿನ ಸಂಭಾಷಣೆ ನಡೆದಿದ್ದು ಅಶ್ವಿನಿ ಗೌಡಾಗೆ ರಕ್ಷಿತಾ ನಿಜಕ್ಕೂ ಅವಮಾನ ಮಾಡಿದ್ದರಾ? ಚಪ್ಪಲಿ ತೋರಿಸಿ ಮಾತನಾಡಿದ್ದರಾ? ಎನ್ನುವ ಕುರಿತು ಬಿಸಿಬಿಸಿ ಚರ್ಚೆಯಾಗಿದೆ. ಅಲ್ಲಿಗೆ ರಕ್ಷಿತಾ ಮಹಾ ಆರೋಪದಿಂದ ಮುಕ್ತಿ ಹೊಂದುವ ಸಾಧ್ಯತೆ ಇದೆ.


