ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಮಿತ್ರ ಪಕ್ಷ ಜೆಡಿಎಸ್ ಪಾಲಿಗೆ ಫೇವರೇಟ್ ಎನ್ನಿಸಿಕೊಂಡಿದ್ದ ಡಿಸಿಎಂ ಪರಮೇಶ್ವರ್ ಏಕಾಂಗಿಯಾದರಾ ಎಂಬ ಅನುಮಾನ ಶುರುವಾಗಿದೆ.
ಕಳೆದೆರಡು ದಿನಗಳಿಂದ ಪರಮೇಶ್ವರ್ ಸಿಎಂ ಕುಮಾರಸ್ವಾಮಿ ಭೇಟಿಗೆ ಸಮಯ ಕೇಳುತ್ತಿದರೂ ಅವರಿಗೆ ಸಿಗುತ್ತಿಲ್ಲ. ಕನಿಷ್ಠ ಫೋನ್‍ನಲ್ಲಿ ಮಾತನಾಡಿಸಿದ್ರೂ ಸಿಎಂ ನಾಟ್ ರಿಚೇಬಲ್ ಆಗಿದ್ದಾರೆ. ಇದು ಸಹಜವಾಗೇ ಪರಮೇಶ್ವರ್ ಅವರಿಗೆ ಬೇಸರಿ ಮೂಡಿಸಿದೆ ಎನ್ನಲಾಗುತ್ತಿದೆ.
Advertisement
Alas! Congress-JDS leaders tried to send a message of unity by holding joint press conference. But Deputy CM @DrParameshwara, who is the face of Congress in coalition government, skipped the crucial meeting. It was like a marriage without bride.
— BJP Karnataka (@BJP4Karnataka) March 19, 2019
Advertisement
ತುಮಕೂರು ಕ್ಷೇತ್ರವನ್ನು ಡಿಸಿಎಂ ಪರಮೇಶ್ವರ್ ವಾಪಸ್ ಕೇಳಿದಕ್ಕೆ ಜೆಡಿಎಸ್ ನಾಯಕರು ಮುನಿಸಿಕೊಂಡಂತೆ ಕಾಣುತ್ತಿದೆ. ಹೀಗಾಗಿಯೇನೋ ಡಿಸಿಎಂ ಪರಮೇಶ್ವರ್ ಮಂಗಳವಾರ ನಡೆದ ದೋಸ್ತಿ ನಾಯಕರ ಸಭೆಗೆ ಬರಲೇ ಇಲ್ಲ. ಪರಮೇಶ್ವರ್ ತಮ್ಮ ಗೈರು ಹಾಜರಿಗೆ ಕಾರಣ ನೀಡಿದ್ದು ಪೂರ್ವನಿಗಧಿತ ಕಾರ್ಯಕ್ರಮದಲ್ಲಿದ್ದರಿಂದ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.