ಮುಂಬೈ: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ನಿರ್ದೇಶಕ ಪಾಲಶ್ ಮುಚ್ಚಲ್ (Palash Muchhal) ಮದುವೆ ಮುಂದೂಡಿಕೆಯಾಗುತ್ತಿದ್ದಂತೆ ಬೇರೆ ಯುವತಿಯ ಜೊತೆ ಪಾಲಶ್ ಚಾಟ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ನ.23ರಂದು ನಿಗದಿಯಂತೆ ಮದುವೆ ನಡೆಯುವಾಗ ಸ್ಮೃತಿ ಮಂಧಾನ ತಂದೆಗೆ ಹೃದಯಘಾತವಾಗಿದ್ದು, ಈ ಹಿನ್ನೆಲೆ ಮದುವೆ ಮುಂದೂಡಿಕೆಯಾಗಿದೆ ಎನ್ನಲಾಗಿತ್ತು. ಆದರೆ ಮುಂದೂಡಿಕೆಯಾಗುತ್ತಿದ್ದಂತೆ ಸ್ಮೃತಿ ಮಂಧಾನ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಪಾಲಶ್ ಹಾಗೂ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.ಇದನ್ನೂ ಓದಿ: ತಂದೆಗೆ ಹೃದಯಾಘಾತ – ಇಂದು ನಡೆಯಬೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
ಇದರ ಮಧ್ಯೆ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಪಾಲಶ್ ಮುಚ್ಚಲ್ ಮೇರಿ ಡಿಕೋಸ್ಟಾ ಎಂಬ ಯುವತಿ ಜೊತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೆಸೇಜ್‌ನಲ್ಲಿ ಪಾಲಶ್ ಯುವತಿಗೆ ಈಜಾಡಲು ಬರುವಂತೆ ಕರೆದಿದ್ದಾರೆ. ಜೊತೆಗೆ ಸ್ಪಾಗೆ ಜೊತೆಯಲ್ಲಿಯೇ ಹೋಗೋಣ, ಮುಂಬೈನ ವರ್ಸೋವಾ ಬೀಚ್‌ಗೆ ಹೋಗೋಣ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮೇರಿ ಜೊತೆ ಫ್ಲರ್ಟ್ ಮಾಡುವ ರೀತಿ ಮೆಸೇಜ್ ಮಾಡಿದ್ದಾರೆ.
ಇನ್ನೂ ಮೆಸೇಜ್‌ನಲ್ಲಿ ಪಾಲಶ್ ನಮ್ಮಿಬ್ಬರದ್ದು ಲಾಂಗ್ ಡಿಸ್ಟೇನ್ಸ್ ರಿಲೇಶನ್ಶಿಪ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಮೇರಿ ಕೂಡ ನೀನು ಸ್ಮೃತಿಯನ್ನು ಪ್ರೀತಿಸುತ್ತೀರಾ ಎಂದು ಕೇಳಿದ್ದಾರೆ. ಇನ್ನೂ ಮೇರಿ, ನಾನು ಈವರೆಗೂ ಪಾಲಶ್‌ನ್ನು ಭೇಟಿಯಾಗಿಲ್ಲ ಎಂದು ಸ್ಟೋರಿ ಹಾಕಿಕೊಂಡಿದ್ದಾರೆ. ಪಾಲಶ್ ಮೋಸ ಮಾಡಿದ್ದಾರೆ ಎಂಬ ವಿಷಯ ಗೊತ್ತಾಗಿ ಸ್ಮೃತಿ ತಂದೆಗೆ ಹೃದಯಾಘಾತವಾಗಿರಬಹುದು ಎನ್ನಲಾಗಿದೆ.
ಈ ನಡುವೆ ಪಾಲಶ್ ಸಹೋದರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ಸದ್ಯ ನಾವೆಲ್ಲರೂ ತುಂಬಾ ದಿಗ್ಭ್ರಾಂತಗೊಂಡಿದ್ದೇವೆ. ದಯವಿಟ್ಟು ನಮ್ಮ ಖಾಸಗಿ ವಿಷಯಗಳನ್ನು ಗೌರವಿಸಿ ಎಂದು ಬರೆದುಕೊಂಡಿದ್ದಾರೆ.
2019ರಿಂದ ಪ್ರೀತಿಯಲ್ಲಿರುವ ಮಂಧಾನ ಮತ್ತು ಪಾಲಶ್ ಮುಚ್ಚಲ್ 2024ರಲ್ಲಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಇತ್ತೀಚಿಗೆ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಾಲಶ್ ಸ್ಮೃತಿಗೆ ಪ್ರಪೋಸ್ ಕೂಡ ಮಾಡಿದ್ದರು. ಸದ್ಯ ಸ್ಮೃತಿ ಮಂಧಾನಗೆ ಪಾಲಶ್ ಮೋಸ ಮಾಡಿದ್ದಾರಾ? ಇದೇ ವಿಷಯಕ್ಕೆ ಮದುವೆ ಮನೆಯಲ್ಲಿ ರಾದ್ಧಾಂತವಾಗಿರಬಹುದಾ? ಎಂಬ ಚರ್ಚೆ ಜೋರಾಗಿದೆ. ಇನ್ನೂ ಮೇರಿ ಡಿ ಕೋಸ್ಟಾ ಜೊತೆ ಚಾಟ್ ಮಾಡಿದ್ದ ವೈರಲ್ ಫೋಟೋಗಳ ಬಗ್ಗೆ ಸ್ಮೃತಿ ಹಾಗೂ ಪಾಲಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರ್ತಿ – ನಾಳೆ ಪಾಲಶ್ ಮುಚ್ಚಲ್ ಕೈಹಿಡಿಯಲಿದ್ದಾರೆ ಸ್ಮೃತಿ ಮಂಧಾನ

