ನವದೆಹಲಿ: ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ ಸಿನಾ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇವಾಗ ಖುಷಿನಾ ಎಂದು ಬರೆದುಕೊಂಡಿದ್ದಾರೆ. ಇದೇ ಸಿನಾ ಪಿನ್ ಮಾಡಿಕೊಂಡಿರುವ ಟ್ವೀಟ್ ನಲ್ಲಿ ನಾನೋರ್ವ ಮುಸ್ಲಿಂ, ಆದ್ರೆ ಹಿಂದೂಗಿಂತ ಕಡಿಮೆ ಏನಿಲ್ಲ. ನನ್ನ ಧರ್ಮ ಇಸ್ಲಾಂ, ಆದ್ರೆ ನನ್ನ ಸಂಸ್ಕೃತಿ ಹಿಂದೂ ಎಂದು ಬರೆದುಕೊಂಡಿದ್ದಾರೆ.
Advertisement
https://twitter.com/Ibne_Sena/status/1140530531399921664
Advertisement
ಈ ಟ್ವೀಟ್‍ನ್ನು ಸಾಹಿತಿ ಮಧು ಕಿಶ್ವರ್ ರೀಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ಪಾಕಿಸ್ತಾನದವರು ನಟಿ ಮಾಧುರಿಯವರನ್ನು ಕೊಡಿ ಪಾಕಿಸ್ತಾನ ತೆಗೆದುಕೊಳ್ಳಿ ಎಂದು ಜಪಿಸಿದ್ದರು. ಈಗ ಪಂದ್ಯ ಸೋತ ಹತಾಶೆಯಲ್ಲಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಾಕ್ ಕಾಲೆಳೆದಿದ್ದಾರೆ.
Advertisement
At one time Pakistanis used to chant, "Madhuri de do, POK bhi le lo". New ambitions, new frustrations. https://t.co/ZOYvjKeU5w
— Madhu Purnima Kishwar (@madhukishwar) June 18, 2019
Advertisement
ವೈರಲ್ ಫೋಟೋ ನಿಜಾನಾ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಸುಳ್ಳು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. 2016ರಲ್ಲಿ ಕಶ್ಮೀರಾ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ಕೆಲ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.
ಅಂದು ಕಾಶ್ಮೀರಿ ಕೆಲ ಯುವಕರು ಹಸಿರು ಬಣ್ಣದ ದೊಡ್ಡ ಬ್ಯಾನರ್ ಜೊತೆ ಪಾಕಿಸ್ತಾನ ಧ್ವಜಗಳನ್ನು ಹಿಡಿದು ನಿಂತಿದ್ದರು. ಹಸಿರು ಬ್ಯಾನರ್ ಮೇಲೆ ನಮಗೆ ಸ್ವಾತಂತ್ರ ಬೇಕೆಂದು ಬರೆಯಲಾಗಿತ್ತು. ಇದೀಗ ಅದೇ ಫೋಟೋವನ್ನು ಎಡಿಟ್ ಮಾಡಿ, ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
if that's the choice…we would rather give Kashmir than KOHLI ???? pic.twitter.com/BCEvfUHt71
— Rolee Kachru (@Rolee_Kachru) February 10, 2018
ಕಾರ್ಗಿಲ್ ಯುದ್ಧದಷ್ಟೇ ಕಾವು ಪಡೆದ ಮತ್ತು ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಭಾರತದ ವಿರುದ್ಧದ ಸೋಲನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಹಿರಿಯ ಆಟಗಾರರು ಕೂಡ ನಾಯಕ ಸರ್ಫರಾಜ್ ವಿರುದ್ಧ ಕಿಡಿಕಾರಿದ್ದಾರೆ.