ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತಿರುತ್ತೆ. ಟಾಸ್ಕ್ ನಡುವೆ ಸ್ಪರ್ಧಿಗಳು ಕೆಲವೊಮ್ಮ ಗಂಭೀರವಾಗಿ ಅಸ್ವಸ್ಥರಾಗಿರುವ ಉದಾಹರಣೆಯೂ ಇದೆ. ಇದೀಗ ಮಲ್ಲಮ್ಮ ಕುರಿತಾಗಿ ಇಂಥದ್ದೇ ವೀಡಿಯೋವೊಂದು ವೈರಲ್ ಆಗಿದ್ದು ಮಲ್ಲಮ್ಮನಿಗೆ ಏನಾಯ್ತು ಎಂಬ ಆತಂಕ ಆಪ್ತರಲ್ಲಿ ಶುರುವಾಗಿದೆ.
ಬಿಗ್‌ಬಾಸ್ ಸೀಸನ್ 12ರ ಹಿರಿಯ ಸ್ಪರ್ಧಿ ಮಲ್ಲಮ್ಮ (Mallamma). ಇವರ ವಯಸ್ಸು ವೃದ್ಧಾಪ್ಯ ಸೂಚಿಸುತ್ತಿದ್ದರೂ ಮಲ್ಲಮ್ಮನ ಆಟದ ಉತ್ಸಾಹ ಕಮ್ಮಿಯಾಗಿರಲಿಲ್ಲ. ಇದೀಗ ಮಲ್ಲಮ್ಮ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಸ್ಪರ್ಧಿಗಳು ಗಾಬರಿಯಿಂದ ಅಳುತ್ತಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ.
ವೈರಲ್ ವಿಡಿಯೋದಲ್ಲಿ ಮಲ್ಲಮ್ಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುತ್ತಾರೆ. ಮಲ್ಲಮ್ಮನ ಈ ಪರಿಸ್ಥಿತಿ ನೋಡಿದ್ರೆ ಎಂಥವರಿಗೂ ಗಾಬರಿ ಆಗೋದು ನಿಶ್ಚಿತ. ಆದರೆ ಇದು ಓಟಿಟಿಯಲ್ಲಿ ಲೈವ್‌ಸ್ಟ್ರೀಮನ್ ವಿಡಿಯೋದಲ್ಲಿರುವ ತುಣುಕಾಗಿದ್ದು ಇದು ಚಟುವಟಿಕೆಯೊಂದರ ಆಟದ ಭಾಗವಾಗಿದೆ. ಕಾಲೇಜ್ ಫೆಸ್ಟ್‌ನಲ್ಲಿ ಟಾಸ್ಕ್‌ವೊಂದಕ್ಕಾಗಿ ಮಾಡಿರುವ ಅಭಿನಯದಲ್ಲಿ ಮಲ್ಲಮ್ಮ ಹಾಗೆ ನಟಿಸಿದ್ದಾರೆ.
ಸ್ಕಿಟ್‌ನ ಒಂದು ಭಾಗವನ್ನ ಕಟ್ ಮಾಡಿ ವೈರಲ್ ಮಾಡಲಾಗಿದೆ. ಆದರೆ ವೈರಲ್ ವೀಡಿಯೋ ನೋಡಿದರೆ ಮಲ್ಲಮ್ಮನಿಗೆ ಅಪಾಯ ಆಯ್ತಾ ಎಂಬ ಅನುಮಾನ ಮೂಡುವಂತಿದೆ.




