ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (Donald Trump) ಜೊತೆಗಿನ ಬಹಿರಂಗ ಚರ್ಚೆಯ ವೇಳೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಬ್ಲೂಟೂತ್ ಸಾಧನ ಬಳಸಿದ್ರಾ ಹೀಗೊಂದು ಪ್ರಶ್ನೆ ಎದ್ದಿದೆ.
ಹೌದು. ಕಮಲಾ ಹ್ಯಾರಿಸ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿವಿಯಲ್ಲಿ ಓಲೆ ಧರಿಸಿದ್ದರು. ಆದರೆ ಅದು ಓಲೆಯಲ್ಲ. ಅದು ನೋವಾ ಕಂಪನಿಯ ಬ್ಲೂಟೂತ್ ಆಡಿಯೋ ಹೆಡ್‌ಫೋನ್ ಎಂದು ಟ್ರಂಪ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ.
Advertisement
🚨🚨KAMALA HARRIS EXPOSED FOR WEARING EARPIECE IN DEBATE *PROOF
She is seen wearing an earring developed by Nova Audio Earrings first seen at CES 2023.
This earring has audio transmission capabilities and acts as a discreet earpiece.
Kamala Harris confirms claims that a… pic.twitter.com/1y60rUdJT0
— ELECTION2024 🇺🇸 (@24ELECTIONS) September 11, 2024
Advertisement
ಟ್ರಂಪ್ ಅಭಿಮಾನಿಗಳ ಆರೋಪಕ್ಕೆ ಕಮಲಾ ಹ್ಯಾರಿಸ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಕಮಲಾ ಹ್ಯಾರಿಸ್ ಕಿವಿಯೋಲೆ ಧರಿಸಿದ್ದಾರೆ. ಯಾವುದೇ ಬ್ಲೂ ಟೂತ್ ಸಾಧನ ಧರಿಸಿಲ್ಲ ಎಂದಿದ್ದಾರೆ.
Advertisement
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಚರ್ಚೆ ವೇಳೆ ಈ ರೀತಿಯ ಆರೋಪ ಬರುವುದು ಹೊಸದೆನಲ್ಲ 2016 ರಲ್ಲಿ ಹಿಲರಿ ಕ್ಲಿಂಟನ್, 2020 ರಲ್ಲಿ ಜೋ ಬೈಡನ್ ಬ್ಲೂಟೂತ್ ಸಾಧನ ಬಳಸಿದ್ದಾರೆ ಎಂಬ ವಿಷಯ ಚರ್ಚೆಯಾಗಿತ್ತು. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ
Advertisement
ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೊದಲ ಬಾರಿಗೆ ಸೆ.10 ರಂದು ಮುಖಾಮುಖಿಯಾಗಿದ್ದರು. ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ ಆಯೋಜಿಸಿದ್ದ ಬಹಿರಂಗ ಚರ್ಚೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್ ಹಿಲ್ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದರು.