– ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಅಂತ ಜ್ಯೋತಿ ಗೊತ್ತಿತ್ತು
ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಕುರಿತು ಒಂದಾದಮೇಲೊಂದು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. 33 ವರ್ಷದ ಯೂಟ್ಯೂಬರ್‌ನ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿದ ಹರಿಯಾಣ ಪೊಲೀಸರು (Haryana Police) ಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.
ಪೊಲೀಸ್ ಮೂಲಗಳು ಹೇಳುವಂತೆ, ಜ್ಯೋತಿ ನಾಲ್ವರು ಪಾಕಿಸ್ತಾನಿ ಗುಪ್ತಚರ (Pakistani Intelligence) ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ನಾಲ್ವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ನಾಲ್ವರ ಪೈಕಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಡ್ಯಾನಿಶ್, ಅಹ್ಸಾನ್ ಮತ್ತು ಶಾಹಿದ್ ಸೇರಿದ್ದಾರೆ. ಸದ್ಯ ಪಾಕಿಸ್ತಾನ ಭದ್ರತಾ ಸಂಸ್ಥೆಯೊಳಗಿನ ಈ ಏಜೆಂಟರ ಹುದ್ದೆಗಳು ಮತ್ತು ಉದ್ಯೋಗ ಶೀರ್ಷಿಕೆಗಳನ್ನು ದೃಢೀಕರಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್
ಇದಕ್ಕೂ ಮುನ್ನವೇ ಜ್ಯೋತಿ ಮಲ್ಹೋತ್ರಾಳಾ ಲ್ಯಾಪ್‌ಟಾಪ್, ಫೋನ್ ಸೇರಿದಂತೆ ಹಲವು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಅನೇಕ ಸಂದೇಶಗಳನ್ನ ಅಳಿಸಿದ ಹೊರತಾಗಿಯೂ 12 ಟಿಬಿ (12 ಸಾವಿರ ಜಿಬಿ) ಡೇಟಾವನ್ನು ರಿಟ್ರೀವ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಕ್ ಜೊತೆಗಿನ ಇನ್ನಷ್ಟು ಸುಳಿವುಗಳನ್ನು ಪತ್ತೆಹಚ್ಚಲು ಡೇಟಾಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ
ಇನ್ನೂ ಈ ಡೇಟಾಗಳ ಪ್ರಕಾರ, ಯೂಟ್ಯೂಬರ್ ಜ್ಯೋತಿಗೆ ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಎಂದು ಗೊತ್ತಿತ್ತು, ಆದರೂ ಭಯ ಇಲ್ಲದಂತೆ ಅವರೊಂದಿಗಿನ ಸಂಪರ್ಕವನ್ನು ಮುಂದುವರಿಸಿದ್ದಳು ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಶುರುವಾದ ಅರ್ಧ ಗಂಟೆಯ ನಂತರವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು: ಜೈಶಂಕರ್
ಇನ್ನೂ ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನೂ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.
ಸದ್ಯ ಹರಿಯಾಣದ ಹಿಸ್ಸಾರ್ ಪೊಲೀಸರ ಕಸ್ಟಡಿಯಲ್ಲಿ ಜ್ಯೋತಿ ಇದ್ದಾಳೆ. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ