ನವದೆಹಲಿ: ಪಾಕಿಸ್ತಾನದ ಎಫ್ 16 (F 16) ಯುದ್ಧ ವಿಮಾನವನ್ನು ಭಾರತ (India) ಹೊಡೆದು ಹಾಕಿದ್ಯಾ ಎಂಬ ಪ್ರಶ್ನೆಎದ್ದಿದೆ.
ಭಾರತೀಯ ಸೇನೆ (Indian Army) ಬಿಡುಗಡೆ ಮಾಡಿದ ಒಂದು ವಿಡಿಯೋದಿಂದ ಈ ಪ್ರಶ್ನೆ ಎದ್ದಿದೆ. ಭಾರತೀಯ ಸೇನೆಯ Western Command ಇಂದು ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಕೆಲ ವಿಡಿಯೋಗಳನ್ನು ರಿಲೀಸ್ ಮಾಡಿದೆ.
ಈ ವಿಡಿಯೋದಲ್ಲಿ ಆಕಾಶದಿಂದ ದೊಡ್ಡ ವಸ್ತುವೊಂದು ಬೀಳುತ್ತಿರುವುದನ್ನು ನೋಡಬಹುದು. ಬಿದ್ದಂತಹ ವಸ್ತು ಏನು ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ನೆಟ್ಟಿಗರು ಇದು ಎಫ್16 ಯುದ್ಧ ವಿಮಾನ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
📍🇮🇳🪖 In the first few seconds of the video released by @westerncomd_IA shows something big falling from the sky …
What could be that… I feel like a black crow …?🤔😜 pic.twitter.com/Bye5yy5dBn
— OsintTV 📺 (@OsintTV) May 19, 2025
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಡಿಜಿಎಂಒಗಳ ಸುದ್ದಿಗೋಷ್ಠಿ ನಡೆಯಿತು. ಈ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಲಾಗಿದ್ಯಾ ಎಂಬ ಪ್ರಶ್ನೆಯನ್ನು ಪತ್ರಕರ್ತರು ಕೇಳಿದ್ದರು.
ಈ ಪ್ರಶ್ನೆಗೆ ಏರ್ ಮಾರ್ಷಲ್ ಎಕೆ ಭಾರ್ತಿ ಉತ್ತರಿಸಿ, ಹೌದು ನಾವು ಕೆಲವೊಂದನ್ನು ಹೊಡೆದು ಉರುಳಿಸಿದ್ದೇವೆ. ಆದರೆ ಅವುಗಳ ಭಾಗಗಳು ನಮ್ಮ ಬಳಿ ಇಲ್ಲ. ಆದರೆ ನನ್ನ ಬಳಿ ಸಂಖ್ಯೆಯಿದೆ. ಈ ಸಂಖ್ಯೆಯನ್ನು ಈಗಲೇ ಹೇಳುವುದು ಸರಿಯಲ್ಲ. ತಾಂತ್ರಿಕವಾಗಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಪಾಕ್ ಉಗ್ರ ನೆಲೆ ಧ್ವಂಸದ ಮತ್ತೊಂದು ವಿಡಿಯೋ ವೈರಲ್ – ಪ್ರತೀಕಾರವಲ್ಲ ಇದು ನ್ಯಾಯ ಎಂದ ಸೇನೆ!
“We have SHOT DOWN a few planes. I have the numbers, but I don’t want to rush on it
~ Why do you say 4th Gen, let us say they (planes) were HIGH-TECH.”🥶🇮🇳
That Smile at the end says it all. Perhaps why USA wanted to prevent HUMILIATION 😂🔥 pic.twitter.com/Y6Kn7C3GaR
— The Analyzer (News Updates🗞️) (@Indian_Analyzer) May 11, 2025
ಈ ಉತ್ತರಕ್ಕೆ ಪತ್ರಕರ್ತರು 4ನೇ ತಲೆಮಾರು + ಯುದ್ಧ ವಿಮಾನವೇ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಯಾಕೆ 4ನೇ ತಲೆಮಾರು? ನಾವು ಅದನ್ನು ಹೈಟೆಕ್ ಮಾಡೋಣ ಎಂದು ಉತ್ತರಿಸಿದ್ದರು.
ಎಫ್ 16 ಯುದ್ಧ ವಿಮಾನವನ್ನು ಅಮೆರಿಕದ ಜನರಲ್ ಡೈನಾಮಿಕ್ಸ್ ಕಂಪನಿ ತಯಾರಿಸಿದೆ. ಭಾರತದ ಮೇಲಿನ ದಾಳಿಗೆ ಪಾಕಿಸ್ತಾನ ಈ ಯುದ್ಧ ವಿಮಾನವನ್ನು ಬಳಸಿದೆ ಎನ್ನಲಾಗುತ್ತಿದೆ. ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಿದ್ದವು. ಈ ವೇಳೆ ಮಿಗ್ 21ನಲ್ಲಿದ್ದ ಅಭಿನಂದನ್ ವರ್ಧಮಾನ್ ಅವರು ಡಾಗ್ ಫೈಟ್ ಮಾಡಿ ಎಫ್ 1 ಯುದ್ಧ ವಿಮಾನವನ್ನು ಬೀಳಿಸಿದ್ದರು.
ಅಮೆರಿಕ ಈ ಹಿಂದೆ ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ನೀಡಿತ್ತು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಈ ವಿಮಾನಗಳನ್ನು ಬಳಕೆ ಮಾಡಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಈ ವಿಮಾನಗಳನ್ನು ಪಾಕ್ ಭಾರತದ ವಿರುದ್ಧ ಕಾರ್ಯಾಚರಣೆಗೆ ಬಳಕೆ ಮಾಡಿತ್ತು.