Connect with us

Bollywood

ಆಸ್ಟ್ರೇಲಿಯಾದ ಇನಿಯನ ಜೊತೆ ಇಲಿಯಾನಾ ಗಪ್ ಚುಪ್ ಮದುವೆ?

Published

on

ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಝ್ ಆಸ್ಟ್ರೇಲಿಯಾದ ಗೆಳೆಯ ಆ್ಯಂಡ್ರ್ಯೂ ನೀಬೋನ್ ಜೊತೆಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕ್ರಿಸ್‍ಮಸ್ ಹಬ್ಬದಂದು ನೀಬೋನ್ ಜೊತೆಯಿರುವ ಫೋಟೋವನ್ನು ಇಲಿಯಾನಾ ಇನ್ ಸ್ಟಾಗ್ರಾಂನಲ್ಲಿ ‘ಹಬ್ಬಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಕ್ರಿಸ್‍ಮಸ್ ಹಬ್ಬದಂದು ಇಲಿಯಾನಾ ರೆಡ್ ಗೌನ್ ಧರಸಿ ಕ್ರಿಸ್‍ಮಸ್ ಟ್ರೀಯನ್ನು ಅಲಂಕರಿಸುತ್ತಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ ಈ ವರ್ಷದ ನನ್ನ ಮೆಚ್ಚಿನ ಸಮಯ, ಕ್ರಿಸ್‍ಮಸ್ ಟೈಂ, ಖುಷಿಯಾದ ರಜೆ ದಿನಗಳು, ಮನೆ, ಪ್ರೀತಿ, ಪತಿಯಿಂದ ಫ್ಯಾಮಿಲಿ ಫೋಟೋ, ಆ್ಯಂಡ್ರ್ಯೂನೀಬೋನ್ ಫೋಟೋಗ್ರಾಫಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಮಾಧ್ಯಮವೊಂದರಲ್ಲಿ ಇಲಿಯಾನಾ,”ನಾನು ನನ್ನ ಸಂಬಂಧದ ಬಗ್ಗೆ ಮಾತನಾಡುವುದಿಲ್ಲ. ಅದರ ಬಗ್ಗೆ ಮಾತನಾಡುವುದರಿಂದ ನನಗೆ ಯಾವುದೇ ಸಮಸ್ಯೆನೂ ಇಲ್ಲ. ಆದರೆ ಜನರು ಆತನ(ಆ್ಯಂಡ್ರ್ಯೂ) ಬಗ್ಗೆ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಆ್ಯಂಡ್ರ್ಯೂ ತನ್ನ ಪಾಡಿಗೆ ಇದ್ದು ಹಾಗೂ ಎಲ್ಲರನ್ನೂ ಗೌರವಿಸುತ್ತಿದ್ದಾನೆ. ಆ್ಯಂಡ್ರ್ಯೂ ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಜನರು ನನ್ನ ಪೋಸ್ಟ್ ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದಾಗ ನನಗೆ ಇಷ್ಟವಾಗಲಿಲ್ಲ ಎಂದು ಇಲಿಯಾನಾ ತಿಳಿಸಿದ್ದಾರೆ.

ಇಲಿಯಾನಾ ಡಿಕ್ರೂಝ್ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, 2017ರಲ್ಲಿ ನಟಿಸಿದ ಅವರ 2 ಚಿತ್ರಗಳು ಯಶಸ್ವಿಕಂಡಿತ್ತು. ಅರ್ಜುನ್ ಕಪೂರ್ ಜೊತೆ ನಟಿಸಿದ ‘ಮುಬಾರಕ’ ಹಾಗೂ ಅಜಯ್ ದೇವ್‍ಗನ್ ಜೊತೆ ನಟಿಸಿದ ‘ಬಾದ್‍ಶಾವೋ’ ಚಿತ್ರ ಯಶಸ್ವಿ ಕಂಡಿದೆ.

Love is all you bloody need. ♥️

A post shared by Ileana D’Cruz (@ileana_official) on

Home ♥️

A post shared by Ileana D’Cruz (@ileana_official) on

A moment. In a world of madness.

A post shared by Ileana D’Cruz (@ileana_official) on

Click to comment

Leave a Reply

Your email address will not be published. Required fields are marked *