ಹುಬ್ಬಳ್ಳಿ: ಕೆಲವು ಕಡೆ ಹಣ ತೆಗೆದುಕೊಂಡು ಟಿಕೆಟ್ (BJP Ticket) ಕೊಟ್ಟಿದ್ದಾರೆ ಅನ್ನೋ ಊಹಾಪೋಹಗಳಿವೆ. ಕೆಲವು ಕಡೆ ಸುದ್ದಿ ಹೊರಗೆ ಬರ್ತಿದೆ, ಕೆಲವು ಕಡೆ ಹೊರಗೆ ಬರ್ತಿಲ್ಲ. ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡಿಸುವ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು ಅಂದ್ರೆ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡೆದಿದೆ ಅಂದ್ರೆ ಅದು ಬಿಜೆಪಿಗೇ ಬಂದು ನಿಲ್ಲುತ್ತೆ. ಆದ್ರೆ ಬಿಜೆಪಿ ನಾಯಕರು (BJP Leaders) ಅಂತಹ ಪದ್ದತಿ ಪಕ್ಷದಲ್ಲಿ ಇಲ್ಲ ಅಂತಾರೆ ಎಂದಿದ್ದಾರೆ. ಇದನ್ನೂ ಓದಿ: ಬರಗಾಲ ಘೋಷಣೆಗೆ ಒತ್ತಾಯ – ಶಾಸಕರ ಕಾರ್ಯಕ್ರಮಗಳ ಘೇರಾವ್‍ಗೆ ರೈತ ಸಂಘ ನಿರ್ಧಾರ
Advertisement
Advertisement
ಮಾಹಿತಿ ಪ್ರಕಾರ, ಹಿಂದೂ ಕಾರ್ಯಕರ್ತರೇ ಡೀಲ್‌ನಲ್ಲಿ ತೊಡಗಿದ್ದಾರೆ. ಕನಕಗಿರಿಯಲ್ಲೂ ಟಿಕೆಟ್ ಡೀಲ್ (BJP Ticket Deal) ಆಗಿರುವ ಬಗ್ಗೆ ದೂರು ದಾಖಲಾಗಿದೆ. ಯಾವ ಆಧಾರದ ಮೇಲೆ ಈ ಪ್ರಕರಣಗಳೆಲ್ಲಾ ಹೊರಗೆ ಬರುತ್ತಿವೆ. ಇನ್ನೂ ಹಲವು ಕಡೆ ದೂರು ದಾಖಲಾಗಿರಬಹುದು. ದೂರು ಕೊಡದೆ ಇರೋರು ಸಾಕಷ್ಟು ಜನ ಇರಬಹುದು, ಕೆಲವರು ಧೈರ್ಯ ಮಾಡದೇ ದೂರು ನೀಡದಿರಬಹುದು. ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಅನ್ನೋದು ಇವಾಗ ಪ್ರೂವ್ ಆಗ್ತಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ
Advertisement
Advertisement
ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ಕೊಡದೇ ಇರುವ ಪರಿಸ್ಥಿತಿ ನೋಡಿದಾಗ ಇಂತಹ ಪ್ರಕರಣಗಳು ಹೊರಗೆ ಬರುತ್ತೆ. ಇದನ್ನ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ವ್ಯಕ್ತಿ ನೋಡಿ ಟಿಕೆಟ್ ಕೊಡುವ ಬೆಳವಣಿಗೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡ್ತಾರೆ ಅಂದ್ರೆ ಏನರ್ಥ? ಇದರಿಂದಲೇ ಅರ್ಥ ಮಾಡಿಕೊಳ್ಳಿ. ಏನೋ ಅವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ. ಪ್ರಾಥಮಿಕ ಹಂತದಲ್ಲಿ ಹಣದ ವ್ಯವಹಾರ ನಡೆದಿದೆ ಅನ್ನೋದು ಸಾಬೀತಾಗಿದೆ. ಚೈತ್ರಾ ಕುಂದಾಪುರ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಚೈತ್ರಾ ಕುಂದಾಪುರ ಕೇಸ್ ಆದ ಮೇಲೆ ಕೆಲವರಿಗೆ ಧೈರ್ಯ ಬಂದಿದೆ ಎಂದು ತಿಳಿಸಿದ್ದಾರೆ.
Web Stories