ದಕ್ಷಿಣದ ಖ್ಯಾತ ನಿರ್ದೇಶಕ, ಹಿಟ್ ಚಿತ್ರಗಳನ್ನು ಚಿತ್ರೋದ್ಯಮಕ್ಕೆ ನೀಡಿರುವ ರಾಜಮೌಳಿ ಕುರಿತು ಗುರುತರ ಆಪಾದನೆಯೊಂದು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಹಿಂದಿಯ ಬ್ರಹ್ಮಾಸ್ತ್ರ (Brahmastra) ಸಿನಿಮಾವನ್ನು ಪ್ರಚಾರ ಮಾಡಲು ಮತ್ತು ಗೆಲ್ಲಿಸಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
ಅಂದುಕೊಂಡಂತೆ ಆಗಿದ್ದರೆ, ಹೈದರಾಬಾದ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ದೊಡ್ಡ ಇವೆಂಟ್ ನಡೆಯಬೇಕಿತ್ತು. ಅದರ ನೇತೃತ್ವವನ್ನು ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್.ಟಿ.ಆರ್ ವಹಿಸಿದ್ದರು. ಆದರೆ, ಭದ್ರತೆಯ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಲಕ್ಷಾಂತರ ಜನರು ಇವೆಂಟ್ ಗೆ ಸೇರುವುದರಿಂದ ಭದ್ರತೆ ಕೊಡುವುದು ಕಷ್ಟ ಎಂದು ಸರಕಾರ ತಿಳಿಸಿದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಿತ್ತು ಚಿತ್ರತಂಡ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?
Advertisement
Advertisement
ಆದರೂ, ಬ್ರಹ್ಮಾಸ್ತ್ರ ಸಿನಿಮಾ ತಮ್ಮದೇ ಎನ್ನುವಂತೆ ಪ್ರಚಾರ ಮಾಡಿದರು ರಾಜಮೌಳಿ. ಸಿನಿಮಾ ಟೀಮ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ದಕ್ಷಿಣದ ಥಿಯೇಟರ್ ಗಳು ಸಿಗುವಂತೆ ನೋಡಿಕೊಂಡರು. ಕರ್ನಾಟಕವೂ ಸೇರಿದಂತೆ ಹಲವು ಕಡೆ ಹಿಂದಿಗಿಂತ ಬೇರೆ ಭಾಷೆಯ, ಅದರಲ್ಲೂ ತೆಲುಗು ಡಬ್ ಸಿನಿಮಾ ಹೆಚ್ಚು ಬಿಡುಗಡೆ ಆಗುವಂತೆ ನೋಡಿಕೊಂಡರು. ಇದಕ್ಕೆಲ್ಲ ರಾಜಮೌಳಿ ಹತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.