ಬೆಳಗಾವಿ: ತನ್ನ ವಿರುದ್ಧ ಸಿಟಿ ರವಿ (CT Ravi) ಅಸಂವಿಧಾನಿಕ ಪದವನ್ನು ಬಳಸಿ ನಿಂದಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ (Amit Shah) ಹೇಳಿಕೆ ಖಂಡಿಸಿ ಪರಿಷತ್‌ನಲ್ಲಿ (Vidhan Parishad) ಇಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಭಾಪತಿ ಕಲಾಪ ಮುಂದೂಡಿದ ವೇಳೆ ಅ ಪದ ಬಳಕೆ ಮಾಡಿದ್ದಾರೆ. ಹತ್ತು ಬಾರಿ ಸಿಟಿ ರವಿ ಆ ಪದವನ್ನು ಬಳಕೆ ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದರು. ನಂತರ ಸ್ಪೀಕರ್ ಹೊರಟ್ಟಿ ಕಚೇರಿಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದರು. ದೂರು ಸ್ವೀಕರಿಸಿದ ಸ್ಪೀಕರ್ ವಿಡಿಯೋ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ನಾನೆಲ್ಲೂ ಅಶ್ಲೀಲ ಪದವನ್ನು ಬಳಸಿಲ್ಲ. ವಿಡಿಯೋ ಪರಿಶೀಲನೆ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಹೇಗೆ ಅನ್ಯಾಯ ಮಾಡಿತು ಎಂದು ಹೇಳಿದ್ದೆ. ನಾನು ಯಾರಿಗೂ ಯಾವ ಪದವನ್ನೂ ಬಳಸಿಲ್ಲ ಎಂದು ತಿಳಿಸಿದರು.