ಯಶ್ ವಿಷಯದಲ್ಲಿ ಬಾಲಿವುಡ್ ಸುಳ್ಳು ಹೇಳಿತಾ?

Public TV
2 Min Read
yash 5

‘ನಾನು ಇರುವ ಕಡೆಯೇ ಎಲ್ಲರನ್ನೂ ಕರೆಯಿಸಿಕೊಂಡಿದ್ದೇನೆ. ನಾನೂ ಎಲ್ಲಿಗೂ ಹೋಗುವುದಿಲ್ಲ’ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ ರಾಕಿಂಗ್ ಸ್ಟಾರ್ ಯಶ್ (Yash). ಹಲವು ದಿನಗಳಿಂದ ಯಶ್ ಬಾಲಿವುಡ್ (Bollywood) ಗೆ ಹೋಗುತ್ತಾರೆ ಎನ್ನುವ ಸುದ್ದಿಯಿತ್ತು. ರಾಮಯಣ ಇಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾವಾಗುತ್ತಿದ್ದು, ಅದರಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು.

yash 5

ಬಿಟೌನ್ ನಲ್ಲಿ ಈ ಸುದ್ದಿಗೆ ಭಾರೀ ಬೇಡಿಕೆ ಬಂದಿತ್ತು. ಯಶ್ ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆಂದು ಹಾಗೂ ಅವರು ರಾವಣನ ಪಾತ್ರ ಮಾಡಲಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನ ಅನೇಕರು ಮಾತನಾಡಿದರು. ಅದರಲ್ಲೂ ಕಂಗನಾ ರಣಾವತ್ (Kangana Ranaut), ಯಶ್ ಅವರು ರಾವಣನ (Raavan) ಪಾತ್ರ ಮಾಡುವುದು ಬೇಡ. ಅವರು ರಾಮನಾಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು.

Yash 2

ಯಶ್ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಬಾಲಿವುಡ್ ಗೆ ಹೋಗುವುದು ನಿಜ ಇರಬಹುದು ಎಂದೇ ನಂಬಲಾಗಿತ್ತು. ಇವತ್ತು ಯಶ್ ಆ ಕುರಿತು ಮಾತನಾಡಿದ್ದಾರೆ. ಬಾಲಿವುಡ್ ಹಬ್ಬಿಸುವ ಸುಳ್ಳು ಸುದ್ದಿಗಳಿಗೆ ಬಲವಾದ ಏಟನ್ನೇ ಕೊಟ್ಟಿದ್ದಾರೆ.

Yash 3

ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್, ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಿವುಡ್ ಗೆ ಹೋಗುವ ವಿಚಾರ ಕೂಡ ಬಂತು. ಅದಕ್ಕೆ ಪ್ರತಿಕ್ರಿಯೆ ನೀಡಿ ‘ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ’ ಎಂದರು ಯಶ್.

Yash 1

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಇಂದು ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.

Yash 4

ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.

ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.

Share This Article