ಚಿತ್ರದುರ್ಗ: ಅದು ಟಗರು ಕಾಳಗವಲ್ಲ, ಮನೆಮನ ಬೆಸೆಯುವ ಕಾಳಗವಾಗಿದೆ. ಇಂಥದ್ದೊಂದು ವಿಶಿಷ್ಟ ಆಚರಣೆ ನಡೆದಿರುವುದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ. ಈ ವಿಭಿನ್ನ ಆಚರಣೆಗೆ ಡಿಚ್ಚಿ ಕಾಳಗ ಎಂದು ಕರೆಯುತ್ತಾರೆ.
Advertisement
ಹೌದು. ಜಿಲ್ಲೆಯ ಹಿರಿಯೂರು (Hiriyur) ತಾಲೂಕಿನ ಸಿಎನ್ ಮಾಳಿಗೆ ಗ್ರಾಮದಲ್ಲಿ ಪೂರ್ವಜರ ಕಾಲದಿಂದ ಬಂದತಹ ಸಂಪ್ರದಾಯ ಇಂದು ಕೂಡ ಜೀವಂತವಾಗಿ ಉಳಿದಿದೆ. ಅಹೋಬಲನರಸಿಂಹಸ್ವಾಮಿ ಕಾರ್ತಿಕ ಉತ್ಸವದಲ್ಲಿ ಈ ವಿಭಿನ್ನ ಆಚರಣೆ ನಡೆಯುತ್ತದೆ. ಈ ಕಾಳಗ ನೋಡೋಕೆ ಸಾವಿರಾರು ಜನ ಭಕ್ತರ ದಂಡೇ ಹರಿದುಬರುತ್ತದೆ. ಇದನ್ನೂ ಓದಿ: ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ
Advertisement
Advertisement
ಏನಿದು ಆಚರಣೆ..?: ಮನಸ್ತಾಪದಿಂದ ತವರಿಗೆ ಬಾರದ ನಾದಿನಿ, ಮುನಿದ ಅತ್ತಿಗೆ ಮಧ್ಯೆ ಡಿಚ್ಚಿ ಸಂಭ್ರಮದ ಆಚರಣೆ ಇದಾಗಿದೆ. ಇಬ್ಬರ ನಡುವೆ ರಾಜಿ ಸಂಧಾನ ಮಾಡುವ ಸಂಪ್ರದಾಯ ಇದಾಗಿದೆ. ಒಂದು ಬದಿಯಲ್ಲಿ ಅತ್ತಿಗೆಯರು, ಮತ್ತೊಂದು ಬದಿಯಿಂದ ನಾದಿನಿಯರು ಓಡೋಡಿ ಬಂದು ಎದುರು- ಬದುರು ನಿಂತು ಡಿಚ್ಚಿ ಹೊಡೆದುಕೊಳ್ಳುವುದಾಗಿದೆ. ಯಾವುದೇ ಮನಸ್ತಾಪವಿದ್ದರೂ ಈ ಆಚರಣೆ ವೇಳೆ ಅತ್ತಿಗೆ, ನಾದಿನಿ ರಾಜಿ ಫಿಕ್ಸ್ ಆಗಿರುತ್ತದೆ. ಈ ಆಚರಣೆಯಿಂದ ಮನೆ, ಗ್ರಾಮದಲ್ಲಿ ಶಾಂತಿ ನೆಲೆಸುವ ನಂಬಿಕೆ ಇಲ್ಲಿನ ಜನರಲ್ಲಿದೆ.
Advertisement
ಒಟ್ಟಿನಲ್ಲಿ ಕುಟುಂಬದಲ್ಲಿ ಬಾಂಧವ್ಯದ ಬೆಸುಗೆ ಬೆಸೆಯುವ ಡಿಚ್ಚಿ ಹಬ್ಬ ಭಾನುವಾರ ನಡೆದಿದ್ದು, ಇದೀಗ ಇದರ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.