ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ರಾಜ್ಯದ ಪ್ರತಿಯೊಬ್ಬರಿಗೂ ತೋರಿಸುವ ಇಂಗಿತವನ್ನು ಹಲವರು ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಬಿಜೆಪಿಯ ಕೆಲ ಶಾಸಕರು ಥಿಯೇಟರ್ ಅನ್ನು ಬುಕ್ ಮಾಡಿ, ಉಚಿತವಾಗಿ ಜನರಿಗೆ ಈ ಸಿನಿಮಾವನ್ನು ತೋರಿಸುತ್ತಿದ್ದಾರೆ. ಹಾಗಾಗಿ ಎಲ್ಲೆಲ್ಲೂ ದಿ ಕಾಶ್ಮೀರ್ ಫೈಲ್ಸ್ ಹವಾ ಕ್ರಿಯೇಟ್ ಆಗಿದೆ. ಇದನ್ನೂ ಓದಿ : ಎರಡು ಮಕ್ಕಳ ಜತೆಗೆ ಮತ್ತೊಂದು ಮಗು ಬೇಕು ಎಂದ ಬಿಗ್ ಬಾಸ್ ಬೆಡಗಿ ಡಿಂಪಿ
Advertisement
‘ಇಂಥದ್ದೊಂದು ಸಿನಿಮಾವನ್ನು ನೋಡಲೇಬೇಕು’ ಎಂದು ಪ್ರಚಾರ ಮಾಡುತ್ತಿದ್ದಂತೆಯೇ ಅದು ಮಂಡ್ಯದ ಪಾಂಡವಪುರ ಟೌನ್ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮಂಡ್ ರವಿ ಅವರ ಕಿವಿಗೂ ಬಿದ್ದಿದೆ. ಹಾಗಾಗಿ ಪಾಂಡವಪುರದ ಕೋಕಿಲ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಆಗಮಿಸಿದ್ದಾರೆ. ಪಾಂಡವಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಈ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನವಿದ್ದರೂ, ಯಾರೂ ಬಂದಿಲ್ಲ. ಹಾಗಾಗಿ ಮೊದ ಮೊದಲು ರವಿಗೆ ನಿರಾಸೆಯಾಗಿದೆ. ಒಬ್ಬನೇ ಇದ್ದ ಕಾರಣಕ್ಕಾಗಿ ಪ್ರದರ್ಶನ ರದ್ದು ಮಾಡುವುದಾಗಿ ಥಿಯೇಟರ್ ಮಾಲೀಕರು ಹೇಳಿದ್ದಾರೆ. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ
Advertisement
Advertisement
ತಾನು ಈ ಸಿನಿಮಾ ನೋಡಲೇಬೇಕೆಂದು ಬಂದಿದ್ದರಿಂದ ಏನು ಮಾಡುವುದೆಂದು ತಿಳಿಯದೇ, ಪ್ರದರ್ಶನ ಮಾಡಲು ಎಷ್ಟು ಟಿಕೇಟ್ ತಗೆದುಕೊಳ್ಳಬೇಕು ಎಂದು ಕೇಳಿದ್ದಾನೆ. ಕನಿಷ್ಠ ಹತ್ತು ಟಿಕೇಟ್ ಆದರೂ ಕೊಂಡರೆ, ಸಿನಿಮಾ ತೋರಿಸುವುದಾಗಿ ಮಾಲೀಕರು ಹೇಳಿದ್ದಾರೆ. ತಾನೊಬ್ಬನೇ ಅಷ್ಟೂ ಟಿಕೇಟ್ ತಗೆದುಕೊಂಡು ಏಕಾಂಗಿ ಆಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದಾರಂತೆ ಡೈಮಂಡ್ ರವಿ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್
Advertisement
ಒಬ್ಬರೇ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರವಿಯ ದೇಶಪ್ರೇಮ ಕಂಡ ಹಲವರು ಹೊಗಳುತ್ತಿದ್ದಾರೆ. ಇಂತಹ ಸಿನಿಮಾವನ್ನು ಒಬ್ಬರೇ ನೋಡುವಾಗ ಭಯವಾಗಲಿಲ್ಲವೆ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.