LatestLeading NewsMain PostSports

ಮತ್ತೊಂದು ಇತಿಹಾಸ – ಡೈಮಂಡ್‌ ಟ್ರೋಫಿ ಗೆದ್ದ ನೀರಜ್‌ ಚೋಪ್ರಾ

ಜ್ಯೂರಿಚ್‌ : ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್‌(Javelin) ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ(Neeraj Chopra) ಅವರು ಸ್ವಿಜರ್ಲ್ಯಾಂಡ್‌ನ ಜ್ಯೂರಿಚ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್‌ ಟ್ರೋಫಿ  (Diamond Trophy) ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

24 ವರ್ಷದ ನೀರಜ್‌ 88.44 ಮೀಟರ್‌ ದೂರ ಎಸೆದು ಮೊದಲ ಸ್ಥಾನ ಪಡೆದರು. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವಕ್ಕೆ ನೀರಜ್‌ ಪಾತ್ರರಾಗಿದ್ದಾರೆ. ಕಳೆದ ತಿಂಗಳು ಲಾಸನ್‌ನಲ್ಲಿ ನಡೆದ  ಡೈಮಂಡ್‌ ಲೀಗ್‌ನಲ್ಲಿ  89.04 ಮೀ. ದೂರದವರೆಗೆ ಜಾವೆಲಿನ್‌ ಎಸೆದು ನೀರಜ್‌ ಜ್ಯೂರಿಚ್‌ಗೆ ಅರ್ಹತೆ ಪಡೆದಿದ್ದರು. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

ನೀರಜ್‌ ಅವರ ಮೊದಲ ಪ್ರಯತ್ನ ವಿಫಲವಾಗಿದ್ದರೆ ಎರಡನೇ ಪ್ರಯತ್ನದಲ್ಲಿ 88.4 ಮೀಟರ್‌ ದೂರ ಎಸೆದರು. ನಂತರದ ಪ್ರಯತ್ನದಲ್ಲಿ ಕ್ರಮವಾಗಿ 88.0 ಮೀ., 86.11 ಮೀ, 87.00 ಮೀಟರ್‌, 83.60 ಮೀ. ಎಸೆದರು.

ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜೆಕ್‌ ರಿಪಬ್ಲಿಕ್‌ನ ಜೇಕಬ್‌ ವಡ್ಲೆಜ್ 86.94 ಮೀ, ಜರ್ಮನಿಯ ವೆಬರ್‌ ಜೂಲಿಯನ್‌ 83.73 ಮೀಟರ್‌ ಎಸೆದು ಕ್ರಮವಾಗಿ ದ್ವಿತೀಯ ಮತ್ತು ತೃತಿಯಾ ಸ್ಥಾನವನ್ನು ಪಡೆದರು.

ಈ ಹಿಂದೆ ನೀರಜ್‌ ಚೋಪ್ರಾ ಎರಡು ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿದ್ದರು. 2017ರಲ್ಲಿ 7ನೇ ಸ್ಥಾನ, 2018ರಲ್ಲಿ 4ನೇ ಸ್ಥಾನ ಪಡೆದಿದ್ದರು.

NEERAJ

ಒಲಿಂಪಿಕ್ಸ್‌ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಸ್ಪರ್ಧೆಯಲ್ಲಿ ಭಾರತ ಇಲ್ಲಿಯವರೆಗೆ ಚಿನ್ನದ ಪದಕ ಗೆದ್ದಿರಲಿಲ್ಲ. ಆದರೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಚಿನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಗಾಯಗೊಂಡ ಹಿನ್ನೆಲೆಯಲ್ಲಿ ನೀರಜ್‌ ಚೋಪ್ರಾ ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ.

Live Tv

Leave a Reply

Your email address will not be published.

Back to top button