ಮಡಿಕೇರಿ: ಅಶ್ವಿನಿ ಆಸ್ಪತ್ರೆಯಲ್ಲಿ ನವೀಕೃತ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಐದು ಡಯಾಲಿಸಿಸ್ ಘಟಕಗಳ ಉದ್ಘಾಟನೆಯು 19 ರಂದು ನೆರವೇರಲಿದೆ. ಅಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.
Advertisement
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸರಾಫ್ ಸಂಸ್ಥೆಯ ಸ್ಥಾಪಕ, ಥಾಯ್ಲೆಂಡ್ ನ ಬೋರ್ಡ್ ಅಫ್ ಟ್ಲೇಡ್ ನ ಸಲಹೆಗಾರ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುಶೀಲ್ ಸರಾಫ್, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್, ಸ್ತ್ರೀ ರೋಗ ತಜ್ಞೆ ಡಾ.ರಜನಿ ಸರಿನ್, ಸೇವಾ ಕೇಂದ್ರದ ತಂಡದ ಸದಸ್ಯ ಮಧುಕರ ದೀಕ್ಷಿತ್,ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ದೇಶಮಾನೆ, ಶ್ರುತ್ ಮತ್ತು ಸ್ಮೀತ್ ಫೌಂಡೇಶನ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಕರಣ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
Advertisement
ದಾನಿಗಳ ನೆರವಿನಿಂದ ಅಶ್ವಿನಿ ಆಸ್ಪತ್ರೆಗೆ ಶಸ್ತ್ರಾಚಿಕಿತ್ಸಾ ಘಟಕ, ಡಯಾಲಿಸಿಸ್ ಘಟಕ, 14 ಆಕ್ಸಿಜನ್ ಕಾನ್ಸನ್ಟ್ರೇಟರ್ ಘಟಕಗಳು ಸೇರಿದಂತೆ ಆಧುನಿಕ ಸೌಲಭ್ಯಗಳು ದೊರೆತಿವೆ ಎಂದು ಅವರು ಹೇಳಿದರು. ಕೋವಿಡ್ ಸಂದರ್ಭದಲ್ಲಿ 50 ಅಧುನಿಕ ಹಾಸಿಗೆಗಳು ಮತ್ತು ಮಂಚಗಳನ್ನು ಅಳವಡಿಸಲಾಗಿದೆ. ಅಲ್ಲದೇ ಆಸ್ಪತ್ರೆಯ ಮುಂಭಾಗ ಬಹುತೇಕ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದೆ ಎಂದರು. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು
Advertisement
ಆರ್ ಎಸ್ ಎಸ್ ಸಂಚಾಲಿತ ಸಂತ್ರಸ್ತ ಪರಿಹಾರದಿಂದ ನವೀಕೃತ ಶಸ್ತ್ರಾಚಿಕಿತ್ಸಾ ಘಟಕ ನಿರ್ಮಾಣವಾಗಿದೆ.ವಿಶ್ವ ಹಿಂದೂ ಪರಿಷತ್ ನ ದೆಹಲಿ, ಬೆಂಗಳೂರು ಘಟಕಗಳಿಂದ ಒಟ್ಟು 8, ರೆಡ್ ಕ್ರಾಸ್ ಸೊಸೈಟಿಯಿಂದ 4,ಬೆಂಗಳೂರು ರೋಟರಿ ಆಗ್ನೇಯಾದಿಂದ 2, ಕುಶಾಲನಗರ ರೋಟರಿಯಿಂದ 2, ಆಕ್ಸಿಜನ್ ಕಾನ್ಸನ್ಟ್ರೇಟರ್ ಆಸ್ಪತ್ರೆಗೆ ನೀಡಲ್ಪಟ್ಟಿವೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಎರಡನೇ ಹಂತದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಭಾರತ ಮತ್ತು ಪ್ರಪಂಚದಾದ್ಯಂತ ಪ್ರತಿಷ್ಠಿತ ವೈದ್ಯರು ಕೈ ಜೋಡಿಸಲು ಸಿದ್ದರಾಗಿದ್ದಾರೆ. ಅಲ್ಲದೇ ಆಸ್ಪತ್ರೆಯ ವತಿಯಿಂದ ಹೊಸ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾಗಿದ್ದು, ಅದರಂತೆ ಕೊಡಗಿನ ಒಟ್ಟು 104 ಗ್ರಾ.ಪಂ ವ್ಯಾಪ್ತಿಗೆ ಒಬ್ಬ ಶುಶ್ರೂಕಿಯನ್ನು ಯೋಜಿಸಿ ಬಿಪಿ, ಸಕ್ಕರೆ ಕಾಯಿಲೆ, ಮೂತ್ರ ಪರೀಕ್ಷೆ, ಗರ್ಭಧಾರಣೆ ಪರೀಕ್ಷೆ ಸೇರಿದಂತೆ ಮೂಲಭೂತ ಆರೋಗ್ಯ ಸೇವೆಗಳನ್ನು ಮನೆ ಬಾಗಿಲಿಗೆ ನೀಡುವುದು. ಹೇರಿಗೆ ವಿಭಾಗ, ಮಕ್ಕಳ ಆರೈಕೆ ಕೇಂದ್ರ, ಹೃದ್ರೋಗ ವಿಭಾಗಗಳನ್ನು ತೆರೆಯಲು ಯೋಜನೆ ಹಮ್ಮಿಕೊಳ್ಳಲಾಗಿದೆ.