6-5=2 ಹಾರಾರ್ ಚಿತ್ರದ ಸೂಪರ್ ಸಕ್ಸಸ್ ನಿರ್ದೇಶಕ ಅಶೋಕ್ ಕೆ.ಎಸ್ ಈ ಬಾರಿ ‘ದಿಯಾ’ ಚಿತ್ರದ ಮೂಲಕ ಟ್ರಾಯಂಗಲ್ ಲವ್ ಸ್ಟೋರಿ ಹೇಳ ಹೊರಟಿದ್ದಾರೆ. ಇಲ್ಲೂ ಹಾರಾರ್ ಎಳೆ ಇದ್ದು ಪ್ರೇಕ್ಷಕರಿಗೆ ಥ್ರಿಲ್ ನೀಡೋದ್ರಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಹೊಸತಂಡ ಕಟ್ಟಿಕೊಂಡು ಹೊಸ ಕಥೆ ಹೇಳ ಹೊರಟಿರೋ ದಿಯಾ ಚಿತ್ರ ಇಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಂಪೂರ್ಣ ಹೊಸತನದಿಂದ ಕೂಡಿರೋ ರೋಮ್ಯಾಂಟಿಕ್ ಪ್ರೇಮ್ ಕಹಾನಿ ದಿಯಾ ಚಿತ್ರದಲ್ಲಿದೆ. ಚಿತ್ರದ ಮೇಕಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತೆ. ಟ್ರಾಯಾಂಗಲ್ ಲವ್ ಸ್ಟೋರಿಯನ್ನು ಹೇಳ ಹೊರಟಿರೋ ನಿರ್ದೇಶಕರು ನಾಯಕಿಯ ಕಣ್ಣುಗಳಲ್ಲೇ ಪ್ರೇಮಕಥೆ ಹೇಳೋ ಪರಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಚಿತ್ರದ ಸ್ಕೀನ್ ಪ್ಲೇ ತುಂಬ ಸೊಗಸಾಗಿದೆ. ಜೊತೆಗೆ ಆಗಾಗ ಚಿತ್ರದಲ್ಲಿ ಬರೋ ಟ್ವಿಸ್ಟ್?ಗಳು ಸಖತ್ ಥ್ರಿಲ್ ನೀಡುತ್ತದೆ. ಅಷ್ಟೇ ಹೃದಯ ಸ್ಪರ್ಶಿಯಾದ ಕಥೆ ಚಿತ್ರದಲ್ಲಿದೆ.
ರೊಮ್ಯಾಂಟಿಕ್ ಪ್ರೇಮ್ ಕಹಾನಿ ಸಿನಿಮಾ ಅಂದ್ರೆ ಅಲ್ಲೊಂದಿಷ್ಟು ಹಾಡುಗಳಿರುತ್ತೆ ಆದ್ರೆ `ದಿಯಾ’ದಲ್ಲಿ ಯಾವುದೇ ಹಾಡುಗಳಿಲ್ಲದೆ ಪ್ರೇಮಕಥೆಯನ್ನು ವಿವರಿಸೋ ಪರಿ ಸೊಗಸಾಗಿದೆ. ಜೊತೆಗೆ ಯಾವುದೇ ಆಡಂಬರ, ಅಬ್ಬರ ಇಲ್ಲದೆ ಚಿತ್ರ ಸುಂದರವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಕುತೂಹಲದ ಅಂಚಿಗೆ ತೆಗೆದುಕೊಂಡು ಹೊಗುತ್ತೆ. ಒಂದು ರೀತಿಯ ರಿಪ್ರೆಶ್ ಮೆಂಟ್ ಪ್ರೇಕ್ಷಕರಿಗೆ ಸಿಗೋದ್ರಲ್ಲಿ ದೂಸ್ರಾ ಮಾತೇ ಇಲ್ಲ.
ಇನ್ನು ಚಿತ್ರದಲ್ಲಿ ನಟಿಸಿರೋ ದೀಕ್ಷಿತ್, ಪೃಥ್ವಿ ಅಂಬರ್, ದಿಯಾ ಪಾತ್ರದಲ್ಲಿ ಅಭಿನಯಿಸಿರೋ ಖುಷಿ ಪ್ರತಿಯೊಬ್ಬರು ತಮ್ಮ ಪಾತ್ರವನ್ನು ಜೀವಿಸಿ ಅಭಿನಯಿಸಿದ್ದಾರೆ. ಪೃಥ್ವಿ ಅಂಬರ್ ಅಭಿನಯವಂತೂ ಎಲ್ಲರ ಗಮನ ಸೆಳೆಯುತ್ತೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು, ವಿಶಾಲ್ ವಿಠಲ್, ಸೌರಭ್ ವಾಘ್ ಮರೆ ಕ್ಯಾಮೆರಾ ಕೈಚಳಕ ತೆರೆ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ.
ರೇಟಿಂಗ್: 4/5