ದಿಯಾ (Dia) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಸರಳ ಸಿಗ್ದ ಸುಂದರಿ ಖುಷಿ ರವಿ (Khushi Ravi) ಹೊಸ ಲುಕ್ ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ಅದೂ ಅತ್ಯಂತ ಜನಬೀಡು ಪ್ರದೇಶವಾದ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ (K.R. Market) ಎನ್ನುವುದು ಮತ್ತೊಂದು ವಿಶೇಷ.
Advertisement
ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಬೆಳಂ ಬೆಳಗ್ಗೆ ಹೂವುಗಳ ಮಧ್ಯೆ ಫೋಟೋಗೆ (Photoshoot) ಫೋಸ್ ಕೊಟ್ಟಿದ್ದಾರೆ. ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್ ನಲ್ಲಿ ಕಂಗೊಳಿಸಿರುವ ಖುಷಿಯ ಚೆಂದದ ಪಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಇದನ್ನೂ ಓದಿ:ಹೊಸ ಫೋಟೋಶೂಟ್ನಿಂದ ಇಂಟರ್ನೆಟ್ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ
Advertisement
Advertisement
ಹೂವುಗಳ ಮಧ್ಯೆ ಮತ್ತೊಂದು ಹೂವು ನೋಡಿ ಫ್ಯಾನ್ಸ್ ಮನಮೋಹಕ ಎನ್ನುತ್ತಿದ್ದಾರೆ. ವಿಂಟೇಜ್ ಲುಕ್ ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ.
Advertisement
ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳು ಸೇರಿದಂತೆ ಒಂದಿಷ್ಟು ತಾರೆಯರಿಗೆ ಫೋಕಸ್ ಫೋಟೋಗ್ರಫಿ ಸ್ಟುಡಿಯೋ ಅಚ್ಚುಮೆಚ್ಚು.
ಸೆಲೆಬ್ರಿಟಿಗಳ ಫೋಟೋಶೂಟ್, ವೆಡ್ಡಿಂಗ್ ಫೋಟೋಗ್ರಫಿ ಹಾಗೂ ನಾನಾ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ನಾಗರಾಜ್ ಸೋಮಯಾಜಿ (Nagaraj Somyaji)ಹೆಸರುವಾಸಿ.