‘ದಿಯಾ’ (Dia) ಖ್ಯಾತಿಯ ದೀಕ್ಷಿತ್ ಶೆಟ್ಟಿ (Dheekshith Shetty) ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ಕನ್ನಡ, ತೆಲುಗಿನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ದೀಕ್ಷಿತ್ ಶೆಟ್ಟಿ ಈಗ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ನಮಗೆ ಪುನೀತ್ ಬೇರೆಯಲ್ಲ, ದರ್ಶನ್ ಬೇರೆ ಅಲ್ಲ: ‘ಅಪ್ಪು’ ಸಿನಿಮಾ ವೀಕ್ಷಿಸಿದ ಡಿ ಬಾಸ್ ಫ್ಯಾನ್
ರಾಮ್ ವೆಂಕಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ದೀಕ್ಷಿತ್ ಆಯ್ಕೆಯಾಗಿದ್ದಾರೆ. ಇದೀಗ ಸರಳವಾಗಿ ಮುಹೂರ್ತ ಕಾರ್ಯಕ್ರಮ ಕೂಡ ಜರುಗಿದೆ. ವಿಭಿನ್ನ ಕಥೆಯ ಮೂಲಕ ಕಾಲಿವುಡ್‌ಗೆ ಅವರು ಎಂಟ್ರಿ ಕೊಡುತ್ತಿದ್ದಾರೆ.
View this post on Instagram
ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸು, ಸ್ಟ್ರಾಬೆರಿ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ತೆಲುಗಿನ ಕಿಂಗ್ ಜಾಕಿ ಕ್ವೀನ್ ಮತ್ತು ಒಪ್ಪೀಸ್ ಚಿತ್ರಗಳು ನಟನ ಕೈಯಲ್ಲಿವೆ.
ದೀಕ್ಷಿತ್ ಶೆಟ್ಟಿ ಅವರು 2020ರಲ್ಲಿ ‘ದಿಯಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಅವರು ಕೆಟಿಎಂ ಮತ್ತು ಬ್ಲಿಂಕ್ ಮತ್ತು ತೆಲುಗು ಚಿತ್ರಗಳಾದ ಮುಗ್ಗುರು ಮೊನಗಲ್ಲು, ದಿ ರೋಸ್ ವಿಲ್ಲಾ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ಜೊತೆ ‘ದಸರಾ’ (Dasara) ಸಿನಿಮಾ ಮಾಡಿ ಗೆದ್ದಿದ್ದಾರೆ.