ಆದಿತ್ಯ ಧಾರ್ ಅವರ ಧುರಂಧರ್ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ತಂಡವು ಈಗ ಮಾ.19 ರಂದು ‘ಧುರಂಧರ್: ದಿ ರಿವೆಂಜ್’ ರಿಲೀಸ್‌ಗೆ ಸಜ್ಜಾಗುತ್ತಿದೆ. ಧುರಂದರ್-2 ಟ್ರೈಲರ್ ರಿಲೀಸ್ ಆಗಿದ್ದು, ರಿವೇಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್ ಮಿಂಚಿದ್ದಾರೆ.
ರೆಹಮಾನ್ ದಕೈತ್ (ಅಕ್ಷಯ್ ಖನ್ನಾ) ಮರಣದ ನಂತರ ಪಾಕಿಸ್ತಾನದ ಲಿಯಾರಿ ಪಟ್ಟಣದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಣವೀರ್ ಸಿಂಗ್ ಮಾರಕ ಸೇಡಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ನಿಮಿಷ 25 ಸೆಕೆಂಡುಗಳ ಟ್ರೈಲರ್ ಭಯಾನಕವಾಗಿದೆ.
ಸಿನಿಮಾದ ಫಸ್ಟ್ ಪಾರ್ಟ್ ಪ್ರೇಕ್ಷಕರಿಗೆ ಎರಡು ಭಾಗಗಳ ಬೇಹುಗಾರಿಕೆಯ ಸಾಹಸಗಾಥೆಯನ್ನು ಪರಿಚಯಿಸಿತ್ತು. ಈ ಕಥೆಯು ಕರಾಚಿಯಲ್ಲಿ ರಹಸ್ಯವಾಗಿ ಕೆಲಸ ಮಾಡುವ ಭಾರತೀಯ ಗುಪ್ತಚರ ಕಾರ್ಯಕರ್ತನೊಬ್ಬ, ಭಾರತದ ಭದ್ರತೆಗೆ ಬೆದರಿಕೆ ಹಾಕುವ ಭಯೋತ್ಪಾದಕ ಗುಂಪನ್ನು ನಾಶಮಾಡಲು ಕ್ರಿಮಿನಲ್ ಜಾಲಗಳು ಮತ್ತು ರಾಜಕೀಯ ವಲಯಗಳನ್ನು ನ್ಯಾವಿಗೇಟ್ ಮಾಡುವುದನ್ನು ತೋರಿಸುತ್ತದೆ. ಧುರಂಧರ್ 2 ಪಾಕಿಸ್ತಾನದ ಭೂಗತ ಲೋಕದಲ್ಲಿ ಈಗ ದೃಢವಾಗಿ ನೆಲೆಗೊಂಡಿರುವ ರಹಸ್ಯ ಭಾರತೀಯ ಏಜೆಂಟ್ ಹಮ್ಜಾ ಅಲಿ ಮಜಾರಿಯೊಂದಿಗೆ ನಿರೂಪಣೆಯನ್ನು ಮುಂದುವರಿಸುತ್ತದೆ.
ರಣವೀರ್ ಸಿಂಗ್ ಹಿಂದೆಂದೂ ನೋಡಿರದ ಅವತಾರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಉತ್ಸಾಹಭರಿತ ಹಿನ್ನೆಲೆ ಸಂಗೀತವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿದೆ. ಪಾರ್ಟ್ 2 ನಲ್ಲಿ ಕೋಪ, ರೋಷಾವೇಷ, ಹಿಂಸೆಯು ಮತ್ತಷ್ಟು ಭೀಕರವಾದಂತಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 19 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

