ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್-2 (Dhurandhar 2) ಸಿನಿಮಾ ರಿಲೀಸ್‌ಗೂ ಮುನ್ನವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಬಿಡುಗಡೆಗೂ ಮುನ್ನ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ.
‘ಧುರಂಧರ್’ ಚಿತ್ರದ ಮೂಲಕ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿದ್ದ ರಣವೀರ್ ಸಿಂಗ್ ಈಗ ‘ಧುರಂಧರ್ 2: ದಿ ರಿವೆಂಜ್’ ಮೂಲಕ ಮತ್ತೆ ಪ್ರೇಕ್ಷಕರನ್ನು ಮೆಚ್ಚಿಸಲು ಸಜ್ಜಾಗಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ಈ ಬಹು ನಿರೀಕ್ಷಿತ ಪಾರ್ಟ್ 2 ಇದೇ ಮಾ.19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾ.18 ರಂದು ಪ್ರೀಮಿಯರ್ ಶೋ ನಿಗದಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಮುಂಗಡ ಬುಕಿಂಗ್‌ಗಳು ಪ್ರಾರಂಭವಾದವು. ಚಿತ್ರವು ಈಗಾಗಲೇ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್‌ಗಳಲ್ಲಿ ಒಂದನ್ನು ತಲುಪಿಸುವ ಹಾದಿಯಲ್ಲಿದೆ. ಇದನ್ನೂ ಓದಿ: ದುರಂಧರ್ 2 ಟ್ರೈಲರ್ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
ಪೇಯ್ಡ್ ಪ್ರಿವೀವ್ಸ್ ಮಾತ್ರ ಮುಂಗಡ ಟಿಕೆಟ್ ಮಾರಾಟದ ಮೂಲಕ 37.11 ಕೋಟಿ ರೂ. ಗಳಿಸಿವೆ. ಮೊದಲ ದಿನ (ಮಾರ್ಚ್ 19)ದ ಹೊತ್ತಿಗೆ, ಈ ಸ್ಪೈ ಆಕ್ಷನ್ ಥ್ರಿಲ್ಲರ್ ದೇಶಾದ್ಯಂತ 10,000 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ 6.1 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಮುಂಗಡ ಬುಕಿಂಗ್‌ನಿಂದ ಆರಂಭಿಕ ದಿನದ ಸಂಗ್ರಹವು ಇಲ್ಲಿಯವರೆಗೆ 22.70 ಕೋಟಿ ರೂ. ತಲುಪಿದೆ.
ಆರಂಭಿಕ ವಾರಾಂತ್ಯಕ್ಕೆ ವಿದೇಶಗಳಲ್ಲಿ ಪ್ರಿ-ಸೇಲ್ಸ್ ಸುಮಾರು 60 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಒಟ್ಟು ಮೊತ್ತವು ಬ್ಲಾಕ್ ಸೀಟುಗಳನ್ನು ಒಳಗೊಂಡಂತೆ ಪ್ರಸ್ತುತ 119.81 ಕೋಟಿ ರೂ.ಗಳಷ್ಟಿದೆ ಎಂದು ವರದಿ ತಿಳಿಸಿದೆ.
ಧುರಂಧರ್ 2: ದಿ ರಿವೆಂಜ್ ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಕಾಣಲಿದೆ. ಮಾ.7 ರಂದು ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್

