ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ (Ranveer Singh) ಅಭಿನಯದ `ಧುರಂಧರ್ 2′ (Dhurandhar 2) ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದೆ. ಯಶಸ್ವಿ ಪ್ರದರ್ಶನದೊಂದಿಗೆ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದೆ.
ವಿಶ್ವದಾದ್ಯಂತ ಒಟ್ಟು 1,006 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
ಆರು ದಿನಗಳಲ್ಲಿ 1,000 ಕೋಟಿ ರೂ.ಗಳ ಗಡಿ ದಾಟಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ 2′ ಮೊದಲ ಸ್ಥಾನದಲ್ಲಿದೆ. ಎಸ್.ಎಸ್. ರಾಜಮೌಳಿ ಅವರ `ಬಾಹುಬಲಿ 2′ ಚಿತ್ರ 9 ದಿನಗಳಲ್ಲಿ 1,000 ಕೋಟಿ ರೂ. ಗಳಿಸಿದ್ದು, ಮೂರನೇ ಸ್ಥಾನದಲ್ಲಿದೆ. `ಆರ್‌ಆರ್‌ಆರ್’, `ಕೆಜಿಎಫ್ 2′, `ಕಲ್ಕಿ 2898 ಎಡಿ’ ಸಿನಿಮಾಗಳ ದಾಖಲೆಗಳನ್ನು ಇದು ಮುರಿದಿದೆ. ಈ ವರ್ಷ ರಿಲೀಸ್ ಆದ ಚಿತ್ರಗಳಲ್ಲಿ 1,000 ಕೋಟಿ ರೂ. ಗಡಿ ದಾಟಿದ ಮೊದಲ ಸಿನಿಮಾವಾಗಿಯೂ ಗುರುತಿಸಿಕೊಂಡಿದೆ. `ಧುರಂಧರ್’ ಸಿನಿಮಾದ ಮೊದಲ ಭಾಗ ದಾಖಲೆಯ 1,300 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
`ಧುರಂಧರ್ 2′ ಸಿನಿಮಾ ನೋಡಿ ಹಾಡಿ ಹೊಗಳಿದ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶಕ ಆದಿತ್ಯ ಧರ್ ಖುಷಿಯಿಂದ ಥ್ಯಾಂಕ್ಸ್ ಹೇಳಿದ್ದಾರೆ. `ನಿಮ್ಮ ಈ ಪ್ರೋತ್ಸಾಹದ ನುಡಿಗಳು ಪ್ರಾಮಾಣಿಕ ಮತ್ತು ಗಟ್ಟಿ ಕಥೆ ಹೇಳಹೊರಟಿರುವ ನಮಗೆ ದೊಡ್ಡ ಶಕ್ತಿ’ ಎಂದಿದ್ದಾರೆ. ಧುರಂಧರ್ 2ರಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಅರ್ಜುನ್ ರಾಂಪಾಲ್, ಆರ್.ಮಾಧವನ್ ಮತ್ತು ಸಂಜಯ್ ದತ್ ಮೊದಲಾದ ಸ್ಟಾರ್ ನಟರು ಅಭಿನಯಿಸಿದ್ದಾರೆ. `ಧುರಂಧರ್: ದಿ ರಿವೆಂಜ್’ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ.ಇದನ್ನೂ ಓದಿ: ಸೆಟ್ಟೇರುತ್ತಿದೆ ʻಆಪರೇಷನ್ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ

