ಬಾಲಿವುಡ್ ನಿದ್ದೆಗೆಡಿಸಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

Public TV
2 Min Read
Martin 5

ನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ (Teaser) ನೋಡಿದ ಪರಭಾಷಾ ನಟರು ಹಾಗೂ ತಂತ್ರಜ್ಞರು ಅಭಿನಂದನೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಚಿತ್ರಗಳು ಬರುತ್ತಿರುವುದಕ್ಕೆ ಅಕ್ಷರಶಃ ಬಾಲಿವುಡ್ ಕಂಗಾಲಾಗಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಕಬ್ಜ ಸಿನಿಮಾ ಇನ್ನಷ್ಟೇ ರಿಲೀಸ್ ಆಗುತ್ತಿದೆ. ನಂತರ ಮಾರ್ಟಿನ್ ಮತ್ತೆ ಬಾಲಿವುಡ್ (Bollywood) ಅನ್ನು ನಿದ್ದೆಗೆಡಿಸಲಿದೆ.

Martin 4

ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ನ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದೆ. ಈ ಟೀಸರ್ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೇ ಮೊದಲ ಬಾರಿಗೆ ಟೀಸರ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸಬೇಕಿತ್ತು. ಟೀಸರ್ ನೋಡಿದ ನಂತರ ಟಿಕೆಟ್ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ ಅಭಿಮಾನಿಗಳು. ಆ ರೀತಿಯಲ್ಲಿ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ.

Martin 2

ಮಾರ್ಟಿನ್ ಸಾಹಸ ಪ್ರಧಾನ ಸಿನಿಮಾ ಎನ್ನುವುದು ಟೀಸರ್ ನ ಪ್ರತಿ ಫ್ರೇಮ್ ಹೇಳುತ್ತದೆ. ಅದರಲ್ಲೂ ಅಚ್ಚರಿ ಮೂಡುವಂತಹ ಮೈಕಟ್ಟಿನ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡುವುದನ್ನು ನೋಡುವುದೇ ರೋಮಾಂಚನ. ಆ ಮಟ್ಟಿಗೆ ಚಿತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ ಧ್ರುವ ಸರ್ಜಾ. ಟೀಸರ್ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ. ಅದರಲ್ಲೂ ಕಾರ್ ಚೇಸ್ ದೃಶ್ಯ ಮತ್ತಷ್ಟು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

Martin 1

ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್ ಏನಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಒಟ್ಟಿನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
2 Comments

Leave a Reply

Your email address will not be published. Required fields are marked *