CinemaKarnatakaLatestMain PostSandalwood

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಈವರೆಗೂ ಖರ್ಚಾಗಿದ್ದು ಬರೋಬ್ಬರಿ 60 ಕೋಟಿ?

Advertisements

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ನಾನಾ ವಿಚಾರಗಳಿಂದಾಗಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಈ ಸಿನಿಮಾದ ಕುರಿತು ಸಾಕಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಈ ಚಿತ್ರದಲ್ಲಿದೆ. ಪೊಗರು ನಂತರ ಧ್ರುವ ಮಾಗಿದ್ದ ಕಾರಣದಿಂದಾಗಿ ಅಳೆದು-ತೂಗಿ ಮಾರ್ಟಿನ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್. ಅಲ್ಲದೇ, ಅನೇಕ ಸಂಗತಿಗಳ ಕುರಿತು ಬೆಳಕು ಚೆಲ್ಲಿ ಮಾರ್ಟಿನ್‌ಗೆ ಬಣ್ಣಹಚ್ಚಿದ್ದಾರೆ. ಈಗ ಮಾರ್ಟಿನ್ ಸಿನಿಮಾದ ಶೂಟಿಂಗ್ ಫೈನಲ್ ಹಂತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಹೈದರಾಬಾದ್‌ನಲ್ಲಿ ಫೈನಲ್ ಶೆಡ್ಯೂಲ್ ಪ್ಲಾನ್ ಆಗಿದೆಯಂತೆ.

ಮಾರ್ಟಿನ್ ಧ್ರುವ ವೃತ್ತಿ ಜೀವನದ ದುಬಾರಿ ಬಜೆಟ್ ಸಿನಿಮಾ. ಮಾರ್ಟಿನ್‌ಗಾಗಿ ಇಲ್ಲಿವರೆಗೆ ಸುಮಾರು ೬೦ ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಉದಯ್ ಮೆಹ್ತಾ. ನಿರ್ದೇಶಕ ಎ.ಪಿ ಅರ್ಜುನ್ ಪ್ರತಿ ಫ್ರೇಮ್‌ ಅನ್ನೂ ಸಖತ್ ರಿಚ್ಚಾಗಿ ಶೂಟ್ ಮಾಡಿದ್ದಾರಂತೆ. ಒಂದೂವರೆ ನಿಮಿಷದ ಒಂದು ಕಾರ್ ಛೇಸಿಂಗ್ ದೃಶ್ಯವನ್ನು 9 ದಿನ ಶೂಟ್ ಮಾಡಿದ್ದಾರೆ ಅಂದ್ರೆ ಮಾರ್ಟಿನ್ ವಿಶ್ಯುವಲ್ಸ್‌ಗೆ ಎಷ್ಟು ಮಹತ್ವವಿದೆ ಎನ್ನುವುದು ಈ ಮೂಲಕ ಗೊತ್ತಾಗಲಿದೆ.

ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿದ್ದು ತೆಲುಗು, ತಮಿಳಿನ ಸಿನಿರಂಗದ ಖ್ಯಾತನಾಮರು ಮಾರ್ಟಿನ್‌ಗಾಗಿ  ಬಣ್ಣ ಹಚ್ಚಲಿದ್ದಾರೆ ಅನ್ನುವುದು ಸದ್ಯದ ಅಪ್‌ಡೇಟ್. ಎಲ್ಲಾ ಭಾಷೆಯ ಎಲ್ಲಾ ವರ್ಗದ ಜನರು ಮಾರ್ಟಿನ್ ಮೆಚ್ಚಲಿದ್ದಾರೆ ಅನ್ನೊದು ಚಿತ್ರತಂಡ ನಂಬಿಕೆ. ಮಾರ್ಟಿನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಎನ್ನುವ ನಂಬಿಕೆ ಚಿತ್ರತಂಡದ್ದು. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

ಈವರೆಗೂ ಮಾರ್ಟಿನ್ ಮೋಷನ್ ಪೋಸ್ಟರ್ ಬಿಟ್ಟು ಬೇರೆನೂ ರಿವಿಲ್ ಮಾಡಿಲ್ಲ ಚಿತ್ರತಂಡ. ಫೈನಲ್ ಕಾಪಿ ಕೈಗೆ ಬರೋವರೆಗೆ ಏನೂ ರಿವಿಲ್ ಮಾಡೋದು ಬೇಡ ಅಂತ ಫಿಲಂ ಟೀಮ್ ತಿರ್ಮಾನ ಮಾಡಿದೆಯಂತೆ. ಈ ಸಿನಿಮಾದಲ್ಲಿ ಧ್ರುವ ಡಬಲ್ ರೋಲ್‌ನಲ್ಲಿ ಕಾಣಿಸಿದ್ದಾರೆ ಎನ್ನುವ ಸುದ್ದಿಯೂ ಆದೆ. ಆದ್ರೆ ಈ ಪ್ರಶ್ನೆಗೆ ಚಿತ್ರತಂಡದ ಸದಸ್ಯರು ಇನ್ನೂ ಸ್ವಲ್ಪ ದಿನ ಕಾದು ನೋಡಿ ಅಂತಿದ್ದಾರೆ. ಒಟ್ಟಾರೆ ಇದುವರೆಗೆ ಈ ಸಿನಿಮಾಗೆ ೬೦ ಕೋಟಿ ಖರ್ಚಾಗಿದ್ದು, ೧೦ ಫೈಟ್‌ಗಳಿಂದ ಈ ಚಿತ್ರ ಕೂಡಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

Live Tv

Leave a Reply

Your email address will not be published.

Back to top button