ಬೆಂಗಳೂರು: ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಭರ್ಜರಿ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಅಭಿನಯಿಸಿರುವ ಈ ಸಿನಿಮಾ ಇವತ್ತಿಗೆ 50 ನೇ ದಿನವನ್ನು ಪೂರೈಸಿ ಮುನ್ನುಗ್ಗುತ್ತಿದೆ.
ನಟ ಧ್ರುವ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇವರು ಮಾಡಿದ ಮೊದಲನೇ ಸಿನಿಮಾ `ಅದ್ಧೂರಿ’ ಯಿಂದಲ್ಲಿಯೇ ಕನ್ನಡ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದು, ಭರ್ಜರಿ ಅವರ ಮೂರನೇ ಸಿನಿಮಾವಾಗಿದೆ. ಅವರ ಅಭಿಮಾನಿಗಳು ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸನ್ನೇ ತಂದುಕೊಟ್ಟಿದ್ದಾರೆ.
Advertisement
Advertisement
ಮಲ್ಟಿಫ್ಲೆಕ್ಸ್ ನಲ್ಲಿ ಮಾತ್ರವಲ್ಲದೆ ಬಿ ಹಾಗೂ ಸಿ ಸೆಂಟರ್ ಗಳಲ್ಲಿ ಕೂಡ ಪ್ರೇಕ್ಷಕರಿಂದ ಚಿತ್ರಕ್ಕೆ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನು ವಾಪಸ್ ಪಡೆದುಕೊಂಡಿದ್ದು, ಐವತ್ತು ದಿನಗಳಿಗೆ 69 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
Advertisement
ಸಾಕಷ್ಟು ಕಾರಣಗಳಿಂದ ‘ಭರ್ಜರಿ’ ಸಿನಿಮಾ ತಡವಾಗಿ ಬಂದಿದ್ದರೂ ಈಗಿನ ಜನರೇಷನ್‍ಗೆ ತಕ್ಕಂತೆ ಸಿನಿಮಾ ಇರುವುದರಿಂದ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ರಾಜ್ಯದ 129 ಸೆಂಟರ್ ನಲ್ಲಿ 50 ದಿನಗಳನ್ನು ಪೂರೈಸಿದೆ. ಸುಮಾರು ಹತ್ತು ವರ್ಷದ ನಂತರ ಇದೇ ಮೊದಲ ಬಾರಿಗೆ ಇಷ್ಟು ಸೆಂಟರ್ ನಲ್ಲಿ ಐವತ್ತು ದಿನಗಳು ಓಡಿರುವ ಸಿನಿಮಾಗಿದೆ.
Advertisement
ಐವತ್ತು ದಿನಗಳನ್ನು ಪೂರೈಸಿರುವುದರಿಂದ ಸಿನಿಮಾ ತಂಡ ಇಂದು ಥಿಯೇಟರ್ ಬಳಿ ಹಬ್ಬದಂತೆ ಆಚರಣೆ ಮಾಡಿದೆ. ಮಧ್ಯಾಹ್ನದ ಶೋನಲ್ಲಿ ಧ್ರುವ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಿಹಿ ಹಂಚಿದ್ದಾರೆ. ಅಭಿಮಾನಿಗಳು ಖುಷಿಗಾಗಿ ರಕ್ತದಾನ, ಅನ್ನದಾನ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಾರೆ ‘ಭರ್ಜರಿ’ ಸಿನಿಮಾದ ಅದ್ದೂರಿ ಯಶಸ್ಸಿನಿಂದ ಧ್ರುವ ಸರ್ಜಾಗೆ ಮತ್ತಷ್ಟು ಬೇಡಿಕೆಯಾಗಿದೆ.
ಚೇತನ್ ಕುಮಾರ್ ಅವರ ನಿರ್ದೇಶನ ಮಾಡಿದ್ದು, ನಟಿ ರಚಿತಾ ರಾಮ್, ಹರಿಪ್ರಿಯ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.youtube.com/watch?v=6LgGIqjKHSg
https://www.youtube.com/watch?v=NGmvPSFlobs