ಸ್ಯಾಂಡಲ್ವುಡ್ ಸ್ಟಾರ್ ಧ್ರುವ ಸರ್ಜಾ (Dhruva Sarja) ಅವರು ತಮ್ಮ ಮಗಳ ಮುಖ ರಿವೀಲ್ ಮಾಡುವ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಮಗಳು ಹುಟ್ಟಿದ 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ (Daughter) ಮುಖವನ್ನ ರಿವೀಲ್ ಮಾಡಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಬಾಲ್ಯದ ಗೆಳತಿ ಪ್ರೇರಣಾರನ್ನ ಪ್ರೀತಿಸಿ 2019ರಲ್ಲಿ ಮದುವೆಯಾದರು. ಕಳೆದ ವರ್ಷ ಧ್ರುವ ದಂಪತಿ ಚೊಚ್ಚಲ ಮಗುವನ್ನ ಬರಮಾಡಿಕೊಂಡರು. ಕಳೆದ 7 ತಿಂಗಳಿಂದ ಮುದ್ದಾದ ಮಗಳ ಮುಖವನ್ನು ನಟ ರಿವೀಲ್ ಮಾಡಿರಲಿಲ್ಲ. ಇದೀಗ ಭರ್ಜರಿ ಫೋಟೋಶೂಟ್ ಮೂಲಕ ಧ್ರುವ ಪೋಸ್ಟ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್
ಧ್ರುವ ಸರ್ಜಾ ಮಗಳಿಗೀಗ 7 ತಿಂಗಳು. 7 ತಿಂಗಳ ಬಳಿಕ ಮೊದಲ ಫೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ಇದು 7 ತಿಂಗಳ ಮಗಳ ಫೋಟೋವಲ್ಲ. ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ನಿಮ್ಮೆಲ್ಲರಿಗೂ ನನ್ನ ಪ್ರೀತಿ. ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಮಗಳು ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ.
View this post on Instagram
ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಎಂದು ಹೇಳಿದ್ದಾರೆ.