ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾ ‘ಕೆಡಿ’ (KD) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ರೀಷ್ಮಾ ನಾಣಯ್ಯಗೆ (Reeshma Nanaiah) ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎನ್ನುತ್ತಾ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ಸಖತ್ ಕ್ರೇಜಿ ಆಗಿ ಮೂಡಿ ಬಂದಿದೆ. ಇದು ಫ್ಯಾನ್ಸ್ ಸಖತ್ ಇಷ್ಟ ಆಗಿದೆ.
‘ಕೆಡಿ’ ಸಿನಿಮಾದಲ್ಲಿ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಹಾಡಿಗೆ ಧ್ರುವ ಸರ್ಜಾ ಮತ್ತು ನಾಯಕಿ ರೀಷ್ಮಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿನ ರಿಯಲ್ ಲುಕ್ ರಿವೀಲ್ ಮಾಡದೆ ಇಬ್ಬರೂ ಟ್ರ್ಯಾಕ್ ಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ಬರೆದಿರುವ ಕ್ಯಾಚಿ ಲಿರಿಕ್ಸ್‌ಗೆ ಮಿಕಾ ಸಿಂಗ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗೀನ ಜನರೇಷನ್ ಯೂತ್ಸ್‌ಗೆ ಹಾಡು ಕನೆಕ್ಟ್ ಆಗೋ ವಿಭಿನ್ನವಾಗಿ ಸಾಂಗ್ ಮಾಡಿದ್ದಾರೆ.
View this post on Instagram
ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ಜೊತೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt), ಶಿಲ್ಪಾ ಶೆಟ್ಟಿ (Shilpa Shetty), ರವಿಚಂದ್ರನ್, ರಮೇಶ್ ಅರವಿಂದ್, ನೋರಾ ಫತೇಹಿ ನಟಿಸಿದ್ದಾರೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ರಿವೀಲ್ ಮಾಡಲಿದೆ.