ಬೆಂಗಳೂರು: ಧ್ರುವ ಸರ್ಜಾ, ಪ್ರೇರಣ ಅವರ ಮದುವೆಯ ಆಹ್ವಾನ ಪತ್ರಿಕೆ ಪಠ್ಯ ಪುಸ್ತಕದಂತೆ ಇದೆ ಎಂದು ಪ್ರಥಮ್ ಬಣ್ಣಿಸಿದ್ದಾರೆ.
ನಟ ಧ್ರುವ ಸರ್ಜಾ ಮದುವೆ ಇದೇ ತಿಂಗಳು ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಿದ್ದಾರೆ. ಇನ್ನೂ ಮದುವೆ ಹುಡುಗ ಧ್ರುವ ತಮ್ಮ ಆತ್ಮೀಯರಿಗೆ ಆಮಂತ್ರಣ ಪತ್ರಿಕೆಯನ್ನು ಕೊಡುತ್ತಿದ್ದಾರೆ. ಬುಧವಾರಷ್ಟೇ ಧ್ರುವ ನಟ ಪ್ರಥಮ್ ಮನೆಗೆ ಹೋಗಿ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಆದರೆ ಪ್ರಥಮ್ ಆಮಂತ್ರಣ ಪತ್ರಿಕೆ ನೋಡಿ ಟೆಕ್ಸ್ಟ್ ಬುಕ್ ರೀತಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.
Advertisement
ಪ್ರಥಮ್ ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಧ್ರುವ ಆಮಂತ್ರಣ ಪತ್ರಿಕೆ ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಗೆ “ಪ್ರೀತಿಯ ಧೃವ ಸರ್ಜಾರವರು ಇರೋದೇ ಹೀಗೇ. ಆಪ್ತರಿಗೆ ಹೆಗಲು ಕೊಡುತ್ತಾರೆ. ಸ್ನೇಹಿತರು ಅಂತ ಬಂದಾಗ ಇನ್ನು ಒಂದು ಹೆಜ್ಜೆ ಬಗ್ಗಿ ಜೊತೆ ನಿಲ್ಲುತ್ತಾರೆ. ಮದುವೆ ಆಮಂತ್ರಣ ಪತ್ರಿಕೆ ಕೊಡುವುದಕ್ಕೆ ಸಂಜೆ ನನ್ನ ಮನೆಗೆ ಬಂದಿದ್ದರು” ಎಂದು ಬರೆದಿದ್ದಾರೆ.
Advertisement
Advertisement
ಪ್ರಥಮ್ ಪೋಸ್ಟ್ ಲ್ಲಿ ಏನಿದೆ?
ಅಯ್ಯೋ ಬಿಡಿ.. ಅವರ ಗಡ್ಡಕ್ಕಿಂತ ದೊಡ್ಡದಾಗಿದೆ ಈಯಪ್ಪ ಮಾಡಿಸಿರುವ ಆನಂತ್ರಣ ಪತ್ರಿಕೆ. ಸೆಕೆಂಡ್ ಪಿಯುಸಿ ಕೆಮಿಸ್ಟ್ರಿ ಟೆಕ್ಸ್ಟ್ ಬುಕ್‌ಗಿಂತ ದೊಡ್ಡದು. ಎಂಜಿನಿಯರಿಂಗ್ ಟೆಕ್ಸ್ಟ್ ಬುಕ್‌ಗಿಂತ ವಿಶಾಲವಾದದ್ದು, ಇವರ ಆಮಂತ್ರಣ ಅಕ್ಷತೆ, ಅರಿಶಿಣ, ಕುಂಕುಮ, ಬಳೆಗಳು ಇನ್ನು ಏನೇನಿಲ್ಲ ಕೇಳಿ ಅದ್ರಲ್ಲಿ. ಇವರು ಮಾಡಿಸಿರುವ ಆಮಂತ್ರಣ ಪತ್ರಿಕೆ ಮದುವೆ ಆದಮೇಲೂ ಸಹಿತ ನಮ್ಮ ಮನೆ ದೇವರ ಕೋಣೆಯಿಂದ ತೆಗೆಯುವ ಹಾಗಿಲ್ಲ. ನೆಲಕ್ಕಂತೂ ಸೋಗಿಸುವ ಹಾಗೇ ಇಲ್ಲ. ಯಾಕೆಂದರೆ ಮದುವೆ ಪತ್ರಿಕೆ ಸುತ್ತಲು ಇವರ ಬಾಸ್ ಆಂಜನೇಯ ಇದ್ದಾರೆ.
Advertisement
ಖುಷಿ ವಿಷಯ ಏನಂದರೆ ಇವರ ಲಕ್ಕಿ ಕಾರಿನಲ್ಲೇ ಬಂದಿದ್ದರು. ಜೊತೆಗೆ ತುಂಬಾ ಹೊತ್ತು ಇದ್ದರು. ಈಗಲೇ ಈ ಪುಣ್ಯಾತ್ಮರು ಕೈಗೆ ಸಿಗಲ್ಲ. ಮದುವೆ ಆದ್ಮೇಲಂತೂ ಫೋನಿಗೂ ಸಿಗಲ್ಲ. ಪೊಗರು ಸೂಪರ್ ಹಿಟ್ ಆದಮೇಲಂತೂ ಇಲ್ವೇಇಲ್ಲ. ನಾವ್ ಬಿಡಬೇಕಲ್ಲಾ. ಆದಷ್ಟು ಬೇಗ ಅಂಜನೇಯ ಸ್ವಾಮಿಗೆ ಇನ್ನೊಬ್ಬ ಭಕ್ತರನ್ನ ಇವರ ಮನೆಯಿಂದನೇ ಕೊಡಲಿ. ಅಂದರೆ ಜೂನಿಯರ್ ಧ್ರುವ ಸರ್ಜಾ ಬರಲಿ ಅಂತ ಆಶಿಸಿ. ಮದುವೆ ಆದ ಮೇಲೆ ವರ್ಷಕ್ಕೆ ಎರಡು ಸಿನಿಮಾ ಬ್ರೋ ಗೊತ್ತಲ್ವಾ ಅಂದ್ರು. ಅಣ್ಣಾ ಮದುವೆ ಆದ ಮೇಲೆ ವರ್ಷಕ್ಕೆ ಒಂದು ಮಕ್ಕಳು ಮಿಸ್ ಮಾಡದೇ ಆಗಲಿ. ಅದರ ಬಗ್ಗೆ ಗಮನಿಸಿ ಅಂತ ಹಾರೈಸಿ ಅದ್ಭುತವಾದ ಆಂಜನೇಯನ ಮೂರ್ತಿ ಕೊಟ್ಟು ನಮ್ ಪ್ರೇರಾಣಾ ಅವರಿಗೂ ಒಳ್ಳೆದಾಗಲಿ ಅಂತ ಹಾರೈಸಿ. ಒಂದು ಅರ್ಧ ಗಂಟೆ ಗೋಳಿಕೊಂಡು ಆಮೇಲೆ ಹೀರೋನ ಕಳಿಸಿಕೊಟ್ಟೆ. ಹಾರೈಸೋ ಜವಾಬ್ದಾರಿ ನಿಮ್ಮದು ಎಂದು ಬರೆದುಕೊಂಡಿದ್ದಾರೆ.