ಧ್ರುವ ಸರ್ಜಾ ನಟನೆಯ `ಮಾರ್ಟಿನ್’ ಅಬ್ಬರಕ್ಕೆ ಮುಹೂರ್ತ ಫಿಕ್ಸ್

Public TV
1 Min Read
martin

`ಪೊಗರು’ ಚಿತ್ರದ ಸಕ್ಸಸ್ ನಂತರ ನಟ ಧ್ರುವ ಸರ್ಜಾ ಎ.ಪಿ ಅರ್ಜುನ್ ನಿರ್ದೇಶನದ `ಮಾರ್ಟಿನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟನೆಯ `ಮಾರ್ಟಿನ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.

aparjun official 211496249 135179492058845 1739874801152261395 n

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ `ಮಾರ್ಟಿನ್’ ಚಿತ್ರದಲ್ಲಿ ಧ್ರುವಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ `ಮಾರ್ಟಿನ್’ ಇದೇ ಸಪ್ಟೆಂಬರ್ 30ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

martin film

ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ನಟನೆಯ ಎರಡನೇ ಚಿತ್ರ ಇದಾಗಿದೆ. `ಮಾರ್ಟಿನ್’ ಸಿನಿಮಾದ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು, ತೆರೆಗೆ ಅಪ್ಪಳಿಸಲು ತೆರೆಮರೆಯಲ್ಲಿ ಈಗಾಗಲೇ ತಯಾರಿ ಶುರುವಾಗಿದೆ. ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ನಟ ಧ್ರುವಾಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನು ಓದಿ:ಆರ್‌ಸಿಬಿ ತಂಡದ ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್

dhruva sarja 3

ಈಗಾಗಲೇ ಚಿತ್ರದ ಪೋಸ್ಟರ್ ಲುಕ್‌ನಿಂದ ಗಮನ ಸೆಳೆದಿರೋ `ಮಾರ್ಟಿನ್’ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.ಸೆಪ್ಟೆಂಬರ್ 30ಕ್ಕೆ ತೆರೆಗೆ ಬರುತ್ತಿರೋ ಮಾರ್ಟಿನ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *