ಹಲ್ಲೆ ಪ್ರಕರಣ: ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಅರೆಸ್ಟ್

Public TV
1 Min Read
dharuv sarja manager

ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ (Prashanth Poojari) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ (Dhruva Sarja) ಮ್ಯಾನೇಜರ್ ಅಶ್ವಿನ್‌ರನ್ನು (Manager Ashwin) ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ದರ್ಶನ್‌ ಬಿಡುಗಡೆಗಾಗಿ ಶಕ್ತಿದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

FotoJet 9

ಮೇ.26 ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿಕೊಂಡಿದ್ದರು. ಹಲ್ಲೆಗೆ ಧ್ರುವ ಮ್ಯಾನೇಜರ್ ಅಶ್ವಿನ್ ನಾಗೇಂದ್ರಗೆ ಸಾಥ್ ಕೊಟ್ಟಿದ್ದ ಎಂದು ತಿಳಿದು ಬಂದಿದೆ.

ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್‌ನಲ್ಲಿ ತರಬೇತಿ ನೀಡುತ್ತಿದ್ದುದ್ದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್‌ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಪ್ಲ್ಯಾನ್ ರೂಪಿಸಿದರು. ತಾವೇ ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದರಂತೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹಲ್ಲೆ ಮಾಡಿಸಿದ್ದರು. ತನಿಖೆ ವೇಳೆ ಅಶ್ವಿನ್ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ಬಂಧಿಸಲಾಗಿತ್ತು. ಆದರೆ ಕಳೆದ 10 ದಿನಗಳ ಹಿಂದೆ ವಿಚಾರಣೆ ಎದುರಿಸಿ ಜಾಮೀನು ಪಡೆದು ಅಶ್ವಿನ್ ಹೊರ ಬಂದಿದ್ದಾರೆ.

ಕಳೆದ ವರ್ಷ ಅಶ್ವಿನ್ ಹುಟ್ಟುಹಬ್ಬಕ್ಕೆ ಧ್ರುವ ಸರ್ಜಾ ಅವರು ದುಬಾರಿ ಫಾರ್ಚೂನರ್ ಕಾರನ್ನು ಗಿಫ್ಟ್ ಮಾಡಿದ್ದರು.

Share This Article