ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ನಿನ್ನೆ ರಾತ್ರಿ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಗ್ರಾಮದ ದರ್ಶನ ಮಾದರ ಎನ್ನುವ ಯುವಕ ಧ್ರುವ ಸರ್ಜಾ ಅವರ ಕಟ್ಟಾ ಅಭಿಮಾನಿ. ನಿನ್ನೆ ರಾತ್ರಿ ಸರ್ಜಾ ಅವರು ದರ್ಶನ್ ಅವ್ರ ಮನೆಗೆ ಭೇಟಿ ನೀಡಿ ಅಭಿಮಾನಿಯ ಆನಂದವನ್ನು ಇಮ್ಮಡಿಗೊಳಿಸಿದ್ದಾರೆ.
Advertisement
ದರ್ಶನ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಗುನಗುತ್ತ ಎಲ್ಲರೊಂದಿಗೆ ಕೆಲ ಸಮಯ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ. ಚಿತ್ರನಟ ಧ್ರುವ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದಿದ್ದರಿಂದ ಅಲ್ಲಿನ ಯುವಕರು ಸರ್ಜಾ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
Advertisement
Advertisement
ಇನ್ನು ದರ್ಶನ ಮಾದರ ಇಳಕಲ್ ನಗರದಲ್ಲಿ ದೃವ ಸರ್ಜಾ ಹೆಸರಿನಲ್ಲೆ ಜಿಮ್ ಆರಂಭಿಸಿದ್ದಾನೆ. ನಿನ್ನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಧ್ರುವ ಸರ್ಜಾ, ಕುಷ್ಟಗಿಗೆ ಸಮೀಪದಲ್ಲಿ ಇರುವ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ಬಂದು ತಮ್ಮನೆಚ್ಚಿನ ಅಭಿಮಾನಿ ಮನೆಗೆ ಭೇಟಿ ನೀಡಿ ಹೋಗಿದ್ದಾರೆ. ನಟ ಧ್ರುವ ಸರ್ಜಾ ಅವ್ರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.