ಬೆಂಗಳೂರು: ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸಗಳು ಈಗಾಗಲೇ ಮುಕ್ತಾಯ ಹಂತದಲ್ಲಿದ್ದು ಮೊನ್ನೆ ದೃವ ಸರ್ಜಾ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ದಸರಾ ಹಬ್ಬದ ಕೊಡುಗೆಯಾಗಿ ಚಿತ್ರದ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಲಾಯಿತು.
ನಟ ದೃವ ಸರ್ಜಾರವರು ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿ ಹಾಡು ತುಂಬಾ ಚೆನ್ನಾಗಿದೆ. ಅದೇ ರೀತಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಉದಯ ಪ್ರಸನ್ನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರೀತಿಸಿದ ಹುಡುಗಿಗಾಗಿ ಮಹಿಷಾಸುರನಾಗುವ ಯುವಕ ಇಬ್ಬರಲ್ಲಿ ಯಾರಾಗುತ್ತಾರೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಸದ್ಯದಲ್ಲೇ ಸೆನ್ಸಾರ್‍ಗೆ ತೆರಳಲಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಮೆಳೇಕೋಟೆ ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಲೀಲಾವತಿ ಸುರೇಶ್ ಕುಮಾರ್, ಪ್ರೇಮ ಚಂದ್ರಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯು.ಡಿ.ವಿ. ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನವಿದೆ.
ರಾಜ್ ಮಂಜು, ಬಿಂದುಶ್ರೀ, ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‍ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಮುಂತಾದವರ ತಾರಾಬಳಗವಿದೆ.