ಜೋಗಿ ಪ್ರೇಮ್ ರೌಡಿಸಂ ಹಿನ್ನೆಲೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಅಂದರೆ, ಅಲ್ಲೊಂದು ಸನ್ಸೇಷನ್ ಇರುತ್ತದೆ. ಜೋಗಿ, ಜೋಗಯ್ಯ, ಕರಿಯಾ ಹೀಗೆ ಸಾಲು ಸಾಲು ರೌಡಿಸಂ ಚಿತ್ರಗಳನ್ನೇ ಪ್ರೇಮ್ ನೀಡಿದ್ದಾರೆ. ಆ ಸಿನಿಮಾಗಳ ಮೂಲಕ ಗೆದ್ದಿದ್ದಾರೆ. ಇದೀಗ ಮತ್ತೆ ಅಂಥದ್ದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್‌ವುಡ್ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ
Advertisement
ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಹೊಸ ಚಿತ್ರದ ಕಥೆಯೂ ರೌಡಿಸಂ ಹಿನ್ನೆಲೆಯಲ್ಲೇ ಬರೆದದ್ದಾಗಿದೆ. ಅದು 70ರ ದಶಕದಲ್ಲಿನ ಬೆಂಗಳೂರು ರೌಡಿಸಂ ಕಥೆಯನ್ನು ತಮ್ಮ ಹೊಸ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ಕಥೆಯಲ್ಲಿ ಬರುವ ಬಹುತೇಕ ಪಾತ್ರಗಳು ನೈಜ ಘಟನೆಗಳಿಗೆ ಸಾಕ್ಷಿ ಆಗಿವೆಯಂತೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ
Advertisement
Advertisement
ಬೆಂಗಳೂರಿನ ಭೂಗತ ಜಗತ್ತಿಗೆ ಅನೇಕ ಕಥೆಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಭೂಗತ ದೊರೆಗಳು ಕೂಡ ಸಿನಿಮಾವಾಗಿದ್ದಾರೆ. ಹಾಗಾಗಿ ಇನ್ನ್ಯಾವ ಘಟನೆಯನ್ನು ಪ್ರೇಮ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. 70 ರ ದಶಕದ ರೌಡಿಸಂ ಅಂದರೆ, ಕೆಲವು ವ್ಯಕ್ತಿಗಳು ನೆನಪಾಗುತ್ತಾರೆ. ಆದರೆ, ಪ್ರೇಮ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸುವುದು ಉತ್ತಮ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ
Advertisement
ಮೊನ್ನೆಯಷ್ಟೇ ಮೈಸೂರಿನಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಮುಂದಿನ ತಿಂಗಳು ಅರಮನೆ ಮುಂದೆ ಅದ್ಧೂರಿ ಕಾರ್ಯಕ್ರಮ ಮಾಡಿ ಟೈಟಲ್ ಲಾಂಚ್ ಮಾಡುತ್ತಾರಂತೆ ನಿರ್ದೇಶಕರು. ಅವತ್ತು ಕೆಲವು ಮಾಹಿತಿಗಳನ್ನು ಅವರು ನೀಡಲಿದ್ದಾರಂತೆ. ಧ್ರುವ ಸರ್ಜಾ ಮಾಡುತ್ತಿರುವ ಪಾತ್ರವು ಬಹುಶಃ ಅಂದೇ ರಿವೀಲ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್
ಈ ಸಿನಿಮಾಗಾಗಿ ಅನೇಕ ಸೆಟ್ ಗಳನ್ನು ಹಾಕಲಿದ್ದಾರಂತೆ ನಿರ್ಮಾಪಕರು. 70 ರ ದಶಕದ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತದೆಯಂತೆ. ಹಾಗಾಗಿ ಸಿನಿಮಾ ಕೊಂಚ ದುಬಾರಿಯೂ ಆಗಲಿದೆ. ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳದೇ ಉತ್ತಮ ಸಿನಿಮಾ ಮಾಡುವುದೇ ಅವರ ಉದ್ದೇಶವಾಗಿದೆಯಂತೆ.