‘ಮಾರ್ಟಿನ್’ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

Public TV
1 Min Read
Martin 1

ಅಂತೂ ಇಂತೂ ‘ಮಾರ್ಟಿನ್’ ಸಿನಿಮಾದ ಡಬ್ಬಿಂಗ್ (Dubbing) ಕೂಡ ಮುಗಿದಿದೆ. ಸುದೀರ್ಘ ಶೂಟಿಂಗ್ ನಂತರ ಮಾರ್ಟಿನ್ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಶೂಟಿಂಗ್ ಮುಗಿದ ಬೆನ್ನಲ್ಲೇ ತಮ್ಮ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮುಗಿಸಿದ್ದಾರೆ. ಆ ಫೋಟೋವನ್ನು ನಿರ್ದೇಶಕ ಎ.ಪಿ. ಅರ್ಜುನ್ (AP Arjun) ಹಂಚಿಕೊಂಡಿದ್ದಾರೆ.

martin

ಮೊನ್ನೆಯಷ್ಟೇ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದರು ನಿರ್ದೇಶಕರು. ಹಲವು ತಿಂಗಳಿಂದ ಈ ಚಿತ್ರದ ಶೂಟಿಂಗ್ ನಡೆಯುತ್ತಲೇ ಇತ್ತು. ಇದೀಗ ಬದಾಮಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಒಡೆಯಲಾಗಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ ಸಿನಿಮಾ ಎಲ್ಲಿಗೆ ಬಂತು ಎಂದು ಅವರ ಅಭಿಮಾನಿಗಳು ಅನೇಕ ಸಲ ಕೇಳಿದ್ದಿದೆ. ಅದಕ್ಕೀಗ ಉತ್ತರ ಸಿಕ್ಕಿದೆ.

martin film

ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಯಾವಾಗ ಸಿನಿಮಾ ಬಿಡುಗಡೆ ಮಾಡೋದು ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

 

ಸದ್ಯಕ್ಕೆ ಶೂಟಿಂಗ್ ಮುಗಿಸಿಕೊಂಡು, ಡಬ್ಬಿಂಗ್ ಕೂಡ ಪೂರೈಸಿದ್ದಾರೆ. ಮಾರ್ಟಿನ್ ಮೊದಲು ಬರತ್ತಾ ಅಥವಾ ಕೆಡಿ ಬರತ್ತಾ ಕಾದು ನೋಡಬೇಕು. ಮಾರ್ಟಿನ್ ಗಿಂತ ಮುಂಚೆಯೇ ಕೆಡಿ ಮುಗಿದಿರೋದ್ರಿಂದ ಚರ್ಚೆಯಂತೂ ಶುರುವಾಗಿದೆ.

Share This Article