ರೀಲ್ ಲೈಫ್‌ನಲ್ಲಿ ಅಷ್ಟೇ ಅಲ್ಲ ರಿಯಲ್‌ನಲ್ಲೂ ತಾವು ಮಾಡುವ ಕೆಲಸಗಳಿಂದ ಅನೇಕ ಸೆಲಬ್ರಿಟಿಗಳು ಹೀರೋ ಆಗಿದ್ದಾರೆ. ಆ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ಅದೇ ನಿಟ್ಟಿನಲ್ಲಿ ಸ್ಯಾಂಡಲ್‌ವುಡ್‌ನ ನಟ ಆ್ಯಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳ ಸಂಘದಿಂದ ಮಹತ್ತರ ಕಾರ್ಯ ನೆರವೇರಿದೆ. ಶಿವಮೊಗ್ಗದ ಸಕ್ರೆಬೈಲು ಆನೆ (Sakrebyle Elephant Camp) ಬಿಡಾರದಲ್ಲಿರುವ ಶಾಲಾ ಮಕ್ಕಳಿಗೆ ಅಭಿಮಾನಿ ಬಳಗ ಪುಸ್ತಕ ವಿತರಿಸಿದೆ.
ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ (Birthday) ಪ್ರಯುಕ್ತ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನ ಮಾಡುತ್ತಾರೆ. ಜೊತೆಗೆ ಆಗಾಗ ಈ ರೀತಿಯಾದ ಕೆಲಸಗಳು ನಟ ಧ್ರುವ ಸರ್ಜಾ ಅವರ ವ್ಯಕ್ತಿತ್ವವನ್ನ ಹಾಗೂ ಅವರ ಅಭಿಮಾನಿಗಳ ಇಂತಹ ಕೆಲಸಗಳು ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿರುತ್ತವೆ. ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮಕ್ಕಳಿಗೆ ಪುಸ್ತಕದ ಜೊತೆಗೆ ಆಟದ ಸಾಮಗ್ರಿಗಳನ್ನ ನೀಡಿ ಮಕ್ಕಳ ಮುಖದಲ್ಲಿ ಮಂದಹಾಸಕ್ಕೆ ಕಾರಣರಾಗಿದ್ದಾರೆ ಧ್ರುವ ಸರ್ಜಾ ಅವರ ಅಭಿಮಾನಿಗಳು.
ಈ ಹಿಂದೆಯೂ ಈ ರೀತಿಯ ಸಮಾಜಮುಖಿ ಕಾರ್ಯಗಳನ್ನ ಮಾಡಿರುವ ಧ್ರುವ ಸರ್ಜಾ ಅಭಿಮಾನಿಗಳು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಸಹಾಯ ಮಾಡಿದ್ದಾರೆ. ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ. ಸದ್ಯ ಧ್ರುವ ಸರ್ಜಾ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಡಿ ಚಿತ್ರ ಬಹುತೇಕ 2026ರಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.


