ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.
ಇಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಧ್ರುವ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಅಭಿಮಾನಿಗಳು ಧ್ರುವ ಸರ್ಜಾ ನೆಚ್ಚಿನ ದೇವರು ಹನುಮಂತನ ಬ್ಯಾಕ್‍ಗ್ರೌಂಡ್‍ನಲ್ಲಿ ಸ್ಟೇಜ್ ನಿರ್ಮಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.
ನಟ ಚಿರಂಜೀವಿ ಸರ್ಜಾ ಅವರು ತಮ್ಮ ಟ್ವಿಟ್ಟರಿನಲ್ಲಿ ಧ್ರುವ ಸರ್ಜಾ ಅವರ ಜೊತೆಯಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಧ್ರುವ ಸರ್ಜಾ. ದೇವರು ನಿನಗೆ ಆಶೀರ್ವದಿಸಲಿ. ಲವ್ ಯೂ ಮ್ಯಾಗ್ನಾ” ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
Happy B’day @DhruvaSarja may god bless u with everything under the sky.. love u Magna #ಜೈಆಂಜನೇಯ pic.twitter.com/KD8FGmkXaX
— Chirranjeevi Sarja (@chirusarja) October 5, 2019
ಧ್ರುವ ಸರ್ಜಾ ಅವರು ಶನಿವಾರ ತಮ್ಮ ಟ್ವಿಟ್ಟರಿನಲ್ಲಿ, “ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದರು. ಅಲ್ಲದೆ ಈ ಫೋಟೋದಲ್ಲಿ ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗಲಿದೆ” ಎಂದು ಬರೆಯಲಾಗಿತ್ತು. ಈ ಫೋಟೋ ಟ್ವೀಟ್ ಮಾಡಿ ಧ್ರುವ “ಪೊಗರು ನಮ್ಮನ್ನು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.
POGARUU ✊????????
Dialogues trailer on Oct 24th ????
Encourage us ????
ಜೈ ಆಂಜನೇಯ ???? pic.twitter.com/SGG7e6OnB1
— Dhruva Sarja (@DhruvaSarja) October 5, 2019
ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.