ಬಾಲಿವುಡ್ ಸ್ಟಾರ್ ನಟ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ (Hema Malini) ಪುತ್ರಿ ಇಶಾ ಡಿಯೋಲ್ (Esha Deol) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಉದ್ಯಮಿ ಭರತ್ ತಖ್ತಾನಿ (Bharat Takhtani) ಜೊತೆಗಿನ 12 ವರ್ಷಗಳ ವೈವಾಹಿಕ ಜೀವನಕ್ಕೆ ‘ಧೂಮ್’ ನಟಿ ಇಶಾ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಸಂಭಾವನೆ ಬಗ್ಗೆ ಮಾತನಾಡಿದವರಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ವಿಚ್ಛೇದನದ ಬಗ್ಗೆ ಇಶಾ ಡಿಯೋಲ್- ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ನೀಡಿದ್ದಾರೆ. ಎಂದು ವರದಿಯಾಗಿದೆ. ಕೆಲ ದಿನಗಳಿಂದ ಇಬ್ಬರ ಡಿವೋರ್ಸ್ (Divorce) ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಧೂಮ್, ಜಸ್ಟ್ ಮ್ಯಾರೀಡ್, ನೋ ಎಂಟ್ರಿ, ಡಾರ್ಲಿಂಗ್, ಶಾದಿ ನಂ.1 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.


