ಮುಂಬೈ: ಮಾರ್ಚ್ 22ರಿಂದ ಆರಂಭವಾಗಲಿರುವ 2025ರ ಐಪಿಎಲ್ ಆವೃತ್ತಿಯಲ್ಲಿ ಎಂ.ಎಸ್ ಧೋನಿ (MS Dhoni) ಹೊಸ ಬ್ಯಾಟ್ ಬಳಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಮಹೇಂದ್ರ ಸಿಂಗ್ ಧೋನಿ ಹೊಸ ಬ್ಯಾಟ್ ಬಳಸಲಿದ್ದು, ಈ ಬ್ಯಾಟ್‌ನ ತೂಕದಲ್ಲಿ ಇಳಿಕೆಯಾಗಲಿದೆ. ಸದ್ಯ ಐಪಿಎಲ್‌ಗಾಗಿ ರಾಂಚಿಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.ಇದನ್ನೂ ಓದಿ: ಹಿರಿಯ ರಂಗ ಕಲಾವಿದೆ ವಿಮಲಾ ರಂಗಾಚಾರ್ ವಿಧಿವಶ
ಸಾಮಾನ್ಯವಾಗಿ ಧೋನಿ 1,250 ರಿಂದ 1,300 ಗ್ರಾಂ ತೂಕದ ಬ್ಯಾಟ್‌ನ್ನು ಉಪಯೋಗಿಸುತ್ತಿದ್ದರು. ಆದರೆ ಇದೀಗ ಅದನ್ನು ಕನಿಷ್ಠ 10-20 ಗ್ರಾಂಗೆ ಕಡಿಮೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇತ್ತೀಚಿಗಷ್ಟೇ ಮೀರತ್‌ನ ಸ್ಯಾನ್ಸ್ಪೇರಿಲ್ಸ್ ಗ್ರೀನ್‌ಲ್ಯಾಂಡ್ಸ್ ಕ್ರಿಕೆಟ್ ಸಲಕರಣೆಗಳ ಕಂಪನಿ, ಧೋನಿಗೆ ನಾಲ್ಕು ಬ್ಯಾಟ್‌ಗಳನ್ನು ನೀಡಿದೆ ಎಂದು ತಿಳಿಸಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರವು ಮಾರ್ಚ್ 10ರ ಬಳಿಕ ಪ್ರಾರಂಭವಾಗಲಿದೆ. ಚೆನ್ನೈ ತಂಡ ಮಾರ್ಚ್ ಮೊದಲ ವಾರವೇ ಇಲ್ಲಿ ಅಭ್ಯಾಸ ನಡೆಸಲು ಮುಂದಾಗಿತ್ತು. ಆದರೆ ಬಿಸಿಸಿಐ ಅನುಮತಿ ನೀಡದ ಕಾರಣ ಸದ್ಯ ತಂಡ ರಾಂಚಿಯಲ್ಲಿ ಧೋನಿ ಅಭ್ಯಾಸ ಮಾಡುತ್ತಿದ್ದಾರೆ.ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ – ಹೈಕಮಾಂಡ್ ಭೇಟಿಗೆ ತೀರ್ಮಾನ