ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ ಧೋನಿಗೆ ವಿಶ್ರಾಂತಿ ನೀಡಲಾಗಿದ್ದು, ಧೋನಿ ಸ್ಥಾನದಲ್ಲಿ ರಿಷಬ್ ಪಂತ್ ತಂಡವನ್ನು ಸೇರಲಿದ್ದಾರೆ.
ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಂತಿಮ ಪಂದ್ಯಗಳನ್ನು ಆಡುವ 11ರ ಬಳಗದಲ್ಲಿ ಬದಲಾವಣೆ ಇದೇಯಾ ಎಂಬ ಪ್ರಶ್ನೆಗೆ ಉತ್ತರಿಸಿ ಸ್ಪಷ್ಟನೆ ನೀಡಿದರು.
Advertisement
Advertisement
ಧೋನಿ ಅಂತಿಮ ಎರಡು ಪಂದ್ಯಗಳನ್ನು ಆಡುತ್ತಿಲ್ಲ. ಪರಿಣಾಮ ತಂಡದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅಲ್ಲದೇ ಶಮಿ ಕೂಡ ಗಾಯಗೊಂಡಿದ್ದು, ಅವರು ಲಭ್ಯವಿರುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ. ಶಮಿ ಆಡದಿದ್ದರೆ ಅವರ ಸ್ಥಾನದಲ್ಲಿ ಭುವನೇಶ್ವರ್ ಆಡುತ್ತಾರೆ. ಪಂದ್ಯಕ್ಕೂ ಮುನ್ನ ಈ ಕುರಿತು ಕೋಚ್ ಹಾಗೂ ನಾಯಕ ಕೊಹ್ಲಿ ತಂಡವನ್ನು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
Advertisement
ರಾಂಚಿ ಕ್ರೀಡಾಂಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಧೋನಿ ಆಸೀಸ್ ನೀಡಿದ್ದ 313 ರನ್ ಮೊತ್ತವನ್ನು ಚೇಸ್ ಮಾಡುವ ಭರವಸೆ ಮೂಡುವಂತೆ ಮಾಡಿದರು, ಆದರೆ 26 ರನ್ ಗಳಿಸಿದ್ದ ವೇಳೆ ಜಂಪಾ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.
Advertisement
ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇನ್ನುಳಿದ 2 ಪಂದ್ಯಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದೆ. ಅಲ್ಲದೇ ವಿಶ್ವಕಪ್‍ಗೂ ಮುನ್ನ ಉತ್ತಮ ಬ್ಯಾಟಿಂಗ್ ಕಾಂಬಿನೇಶನ್ ತಂಡದ ಸಿದ್ಧತೆಯಲ್ಲಿದೆ.
Team India batting Coach Sanjay Bangar: MS Dhoni will not be playing the last two ODIs of the ongoing five-match series against Australia. He is going to take rest after this. pic.twitter.com/tkayIkPhDa
— ANI (@ANI) March 8, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv