ಶ್ರೀನಗರ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಧೋನಿ ಸೈನಿಕರ ಜೊತೆ ವಾಲಿಬಾಲ್ ಆಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಯೋಧರಿಗಾಗಿ ಹಾಡು ಹಾಡಿದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಟೆರಿಟೋರಿಯಲ್ ಆರ್ಮಿ ಅವರ ಮುಂದೆ ಧೋನಿ ಹಾಡನ್ನು ಹಾಡಿದ್ದಾರೆ. ಈ ಮೊದಲು ಧೋನಿ ಸೇನೆ ಜೊತೆ ವಾಲಿಬಾಲ್ ಆಡಿದ ವಿಡಿಯೋ ಹಾಗೂ ಶೂ ಪಾಲೀಶ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಧೋನಿ ಯೋಧರಿಗೆ ಹಾಡು ಹಾಡುವ ಮೂಲಕ ಮನರಂಜನೆ ನೀಡಿದ್ದಾರೆ. ಧೋನಿ ಬಾಲಿವುಡ್‍ನ ‘ಕಭಿ ಕಭಿ’ ಚಿತ್ರದ ‘ಮೇ ಪಲ್ ದೋ ಪಲ್ ಕಾ ಶಾಯರ್ ಹು’ ಹಾಡನ್ನು ಹಾಡಿದ್ದಾರೆ.
Advertisement
https://twitter.com/readubey/status/1157673418344452096?ref_src=twsrc%5Etfw%7Ctwcamp%5Etweetembed%7Ctwterm%5E1157673418344452096&ref_url=https%3A%2F%2Fwww.bhaskarhindi.com%2Fnews%2Flt-col-ms-dhoni-turns-singer-to-entertain-army-men-80447
Advertisement
ಆಗಸ್ಟ್ 15 ರವರೆಗೆ ವಿಕ್ಟರ್ ಫೋರ್ಸ್ ನ ಭಾಗವಾಗಿ ಎಂ.ಎಸ್.ಧೋನಿ ಕಾಶ್ಮೀರ ಕಣಿವೆಯಲ್ಲಿರುವ ಘಟಕದೊಂದಿಗೆ ಇರಲಿದ್ದಾರೆ. ಅಧಿಕಾರಿಗಳ ಕೋರಿಕೆಯಂತೆ ಮತ್ತು ಸೇನಾ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದಂತೆ ಎಂ.ಎಸ್ ಧೋನಿ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ಮಾಡುತ್ತಿದ್ದಾರೆ.
Advertisement
Lt. Colonel Mahendra Singh Dhoni spotted playing volleyball with his Para Territorial Battalion!????????
Video Courtesy : DB Creation #IndianArmy #MSDhoni #Dhoni pic.twitter.com/H6LwyC4ALb
— MS Dhoni Fans Official (@msdfansofficial) August 4, 2019
Advertisement
ವಿಶ್ವಕಪ್ ಬಳಿಕ ಸೇನೆ ಸೇರಿದ ಧೋನಿ ಆರಂಭದ ಮೂರು ದಿನ ಸೇನೆಯ ಪ್ರಾಥಮಿಕ ತರಬೇತಿಯನ್ನು ಪಡೆದಿದ್ದರು. ಈ ವೇಳೆ ಸೇನೆಯ ಬಗ್ಗೆ ಮಾಹಿತಿ, ಫೈರಿಂಗ್ ಸಹ ಹೇಳಿಕೊಡಲಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸದಿಂದ ರಜೆ ಪಡೆದುಕೊಂಡಿರುವ ಧೋನಿ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಧೋನಿ ಸೈನಿಕರೊಂದಿಗೆ ಆಚರಿಸಲಿದ್ದಾರೆ.
ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಆರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು. ಧೋನಿ 2020 ರ ಫೆಬ್ರವರಿಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆ ಮುಂದಿನ ವರ್ಷದ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ ಎಂದು ಹೇಳಲಾಗಿದೆ.