Connect with us

Cricket

ಮದ್ವೆ ಆಗೋವರೆಗೆ ಪುರುಷರೆಲ್ಲರೂ ಸಿಂಹ – ಧೋನಿ ಡೈಲಾಗ್ ವೈರಲ್

Published

on

ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಸದ್ಯ ಕ್ರಿಕೆಟ್ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಬೌಂಡರಿ, ಸಿಕ್ಸರ್ ಗೆ ಬ್ರೇಕ್ ಬಿದ್ದಿದ್ದರೂ ಮಾತಿನಲ್ಲೇ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಚೆನ್ನೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಹಂಚಿಕೊಂಡರು. ಎಲ್ಲರೂ ನನ್ನನ್ನು ಆದರ್ಶ ಪತಿ ಎನ್ನುತ್ತಾರೆ. ಆದರೆ ನಾನು ಅದಕ್ಕಿಂತ ಹೆಚ್ಚು. ಯಾಕೆಂದರೆ ನಾನು ಪತ್ನಿಯ ಇಷ್ಟಕ್ಕೆ ಯಾವತ್ತು ಬೇಡವೆಂದಿಲ್ಲ. ಪತ್ನಿ ಸಂತೋಷವಾಗಿದ್ದರೆ ನಾನು ಖುಷಿಯಾಗಿರುತ್ತೇನೆ. ಆದರೆ ಆಕೆ ಕೇಳಿದಕ್ಕೆಲ್ಲ ನಾನು ಒಪ್ಪಿದರೆ ಮಾತ್ರ ಪತ್ನಿ ಖುಷಿಯಾಗಿರುತ್ತಾಳೆ. ಇದರಿಂದ ಅರ್ಥ ಆಗೋದು ಏನೆಂದರೆ, ಪ್ರತಿಯೊಬ್ಬ ಪುರುಷನೂ ಸಿಂಹನೇ ಮದುವೆ ಆಗುವ ಮೊದಲು ಅಷ್ಟೇ ಎಂದು ಪಂಚಿಂಗ್ ಡೈಲಾಗ್ ಹೇಳಿದ್ದಾರೆ. ಇದನ್ನೂ ಓದಿ:ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

ಮಾಹಿ ಕೂಲ್ ಡೈಲಾಗ್ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಕೇವಲ ಮೈದಾನದಲ್ಲಿ ಮಾತ್ರವಲ್ಲ ಮಾತಿನಲ್ಲೂ ಧೋನಿ ಸೂಪರ್. ಡೈಲಾಗ್‍ನಲ್ಲೂ ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಹೀಗೆ ಸಖತ್ ಡೈಲಾಗ್ ಹೊಡೆದಿರುವ ವಿಡಿಯೋ ತುಣುಕನ್ನು ಎಂ.ಎಸ್ ಧೋನಿ ಫ್ಯಾನ್ಸ್ ಅಫಿಶಿಯಲ್ ಹೆಸರಿನ ಇನ್‍ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ:ಅಪ್ಪನ ಜೊತೆ ಹೊಸ ಜೀಪ್ ತೊಳೆದ ಧೋನಿ ಪುತ್ರಿ: ವಿಡಿಯೋ

ಈ ವಿಡಿಯೋ ನೋಡಿದ ನೆಟ್ಟಿಗರು ಮಾಹಿ ಆಟಕ್ಕೆ ಮಾತ್ರವಲ್ಲ ಅವರ ಮಾತಿಗೂ ಅಭಿಮಾನಿಯಾಗಿದ್ದಾರೆ. 2010ರಲ್ಲಿ ಧೋನಿ ಸಾಕ್ಷಿ ಅವರನ್ನು ವಿವಾಹವಾಗಿದ್ದರು. ದಂಪತಿಯ ಮುದ್ದಿನ ಮಗಳು ಝೀವಾಗೂ ಸಖತ್ ಅಭಿಮಾನಿಗಳು ಇದ್ದಾರೆ. ತಂದೆ ಮಗಳ ವಿಡಿಯೋ ಆಗಾಗಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಲೇ ಇರುತ್ತೆ. ಇದನ್ನೂ ಓದಿ:ಆರು ತಿಂಗಳ ಬಳಿಕ ನೆಟ್‍ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ: ವಿಡಿಯೋ

2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ವೆಸ್ಟ್ ಇಂಡೀಸ್ ಪ್ರವಾಸ, ಸೌತ್ ಆಫ್ರಿಕಾ ವಿರುದ್ಧದ ಸರಣಿ, ಬಾಂಗ್ಲಾ ಸರಣಿ ಹಾಗೂ ಡಿಸೆಂಬರ್ 6 ರಿಂದ ನಡಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮಾಹಿ ಆಯ್ಕೆಯಾಗಿಲ್ಲ. ಆದರೆ 2020ರಲ್ಲಿ ಧೋನಿ ಮತ್ತೆ ಫೀಲ್ಡ್ ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳು ಧೋನಿಯ ಮಿಂಚಿನ ಆಟವನ್ನು ನೋಡಲು ಕಾಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *