ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್‍ಒ ಮಹೇಶ್ ಕೋಣಿ, ಮೂಡಲಗಿ ಪೊಲೀಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‍ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್‍ಒ ಮಹೇಶ್ ಕೋಣಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ
Advertisement
Advertisement
ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳು ತಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ರಕ್ಷಣೆ ಮಾಡಿ ಬಾಟಲ್‍ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಸಿಬ್ಬಂದಿ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ
Advertisement
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದ್ದು, ಶುಕ್ರವಾರ ಸಿಕ್ಕಿರುವ ಏಳು ಭ್ರೂಣ ಮೃತದೇಹಗಳು ಮೂರು ವರ್ಷಗಳ ಹಿಂದೆ ಗರ್ಭಪಾತ ಮಾಡಿದ್ದವು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್.23ರಂದು ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ರಾ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಸುಮ್ಮನೆ ಕುಳಿತಿದ್ದಾರಾ ಎಂಬ ಆರೋಪ ಕೇಳಿಬಂದಿದೆ.