ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್. ಮಾಸ್ ಮತ್ತು ಸೆಂಟಿಮೆಂಟ್ ಪ್ರೇಕ್ಷಕರನ್ನು ಹಾಡುಗಳ ಮೂಲಕ ಆಕರ್ಷಿಸಿರುವ ಕೆಜಿಎಫ್ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಮೊದಲಿಗೆ ‘ಸಲಾಂ ರಾಕಿ ಭಾಯ್’ ಮತ್ತು ಗರ್ಭಧಿ ಎಂಬ ವಿಭಿನ್ನ ಶೈಲಿಯ ಹಾಡುಗಳ ಮೂಲಕ ಎರಡು ವಿಧದ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಇದಾದ ಬಳಿಕ ರಿಲೀಸ್ ಆಗಿದ್ದು ಹಿಂದಿಯ ‘ಗಲಿ ಗಲಿ ಮೇ’ ಹಾಡು. ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚುವಂತೆ ಗೋಲ್ಡ್ ಕ್ವೀನ್ ಮೌನಿ ರಾಯ್ ಹೆಜ್ಜೆ ಹಾಕಿದ್ದ ಹಾಡಿನ ಪ್ರೋಮೋ ದಾಖಲೆಯನ್ನು ಬರೆದಿದೆ.
ಗಲಿ ಗಲಿ ಮೇ ಹಾಡನ್ನು ಹಿಂದಿ ಡಬ್ ಸಿನಿಮಾದಲ್ಲಿ ಬಳಸಿದ್ರೆ, ಕನ್ನಡ ಚಿತ್ರದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ರಿಮೇಕ್ ಮಾಡಲಾಗಿದೆ. ಇಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ ಭಟಿಯಾ ಸೊಂಟ ಬಳುಕಿಸಿದ್ದು, ಲಿರಿಕಲ್ ವಿಡಿಯೋ ಸಖತ್ ಹವಾ ಕ್ರಿಯೇಟ್ ಮಾಡಿದೆ. ಇದೀಗ ಧೀರ ಧೀರ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸಾಹಿತ್ಯ ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
Advertisement
ರವಿ ಬಸ್ರೂರ್ ಅವರ ಸಾಹಿತ್ಯದಲ್ಲಿ ಅನನ್ಯ ಭಟ್, ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಪುನೀತ್ ರುದ್ರಂಗ, ಮೋಹನ್ ಕೃಷ್ಣ, ಹೆಚ್.ಶ್ರೀನಿವಾಸ್ ಮೂರ್ತಿ ಮತ್ತು ವಿಜಯ್ ಅರಸ್ ಕಂಠದಲ್ಲಿ ಹಾಡು ಮೂಡಿ ಬಂದಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲಿಯೇ ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಪಡೆದುಕೊಂಡಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv