‘ದಿಯಾ’ (Dia) ಖ್ಯಾತಿಯ ದೀಕ್ಷಿತ್ ಶೆಟ್ಟಿ (Dheekshith Shetty) ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಅವರು ನಟಿಸಿರುವ ಕನ್ನಡದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ (Bank Of Bhagyalakshmi) ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್- ‘ಸ್ಪಾರ್ಕ್’ನಲ್ಲಿ ನೆನಪಿರಲಿ ಪ್ರೇಮ್
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿನ ಹರ ಓಂ ಎಂದು ಶಿವನ ಕುರಿತಾದ ಸಾಂಗ್ ರಿಲೀಸ್ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡು ರಿಲೀಸ್ ಆಗಿದೆ. ಕನ್ನಡದಲ್ಲಿ ಸಿಂಗರ್ ಶಿಲ್ಪ ಹಾಡಿದ್ರೆ, ತೆಲುಗಿನಲ್ಲಿ ಖ್ಯಾತ ಗಾಯಕಿ ಮಂಗ್ಲಿ (Mangli) ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈ ಹಾಡನ್ನು ಲಹರಿ ವೇಲು ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR
ದೀಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಬೃಂದಾ ಆಚಾರ್ಯ (Brinda Acharya) ನಟಿಸಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಜೊತೆಯಾಗಿ ನಟಿಸಿರೋದ್ರಿಂದ ಈ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.
‘ರಂಗಿತರಂಗ’ ಸಿನಿಮಾ ಖ್ಯಾತಿಯ ಹೆಚ್.ಕೆ ಪ್ರಕಾಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೆ, ಅಭಿಷೇಕ್ ಎಂ ಅವರ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.