ಧಾರವಾಡ: ಮಳೆ ಅವಾಂತರದಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ ಕೊಚ್ಚಿ ಹೋದ ಘಟನೆ ಹುಬ್ಬಳ್ಳಿ-ಧಾರವಾಡ (Hubballi-Dharawada) ಜಿಲ್ಲೆಯಲ್ಲಿ ನಡೆದಿದೆ.
ಕಳೆದ ವಾರ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಯರಿಕೊಪ್ಪದ ಬಳಿ ಜಲಾವೃತವಾಗಿತ್ತು. ಆದರೂ ಬೈಪಾಸ್‌ನಲ್ಲಿ ಇನ್ನೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಪರಿಣಾಮ ಹೊಸದಾಗಿ ನಿರ್ಮಿಸಿದ್ದ ರಸ್ತೆ ಸಂಪೂರ್ಣ ಹಾನಿಯಾಗಿದೆ. ಇದನ್ನೂ ಓದಿ: Lokmanya Tilak Express | ಇಂಜಿನ್ ಸೇರಿ ಹಳಿತಪ್ಪಿದ 8 ಬೋಗಿಗಳು
ಅಷ್ಟಪಥ ಬೈಪಾಸ್ ಕಾಮಗಾರಿ ಪ್ರಯುಕ್ತ ನಿರ್ಮಿಸಿದ್ದ ಈ ಹೊಸ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಸಂಪೂರ್ಣವಾಗಿ ನೀರು ನಿಂತಿದ್ದ ಭಾಗದಲ್ಲಿಯೇ ಕುಸಿತ ಆಗಿದ್ದು, ನೀರಿನ ಪ್ರಮಾಣ ನಿಂತರೂ ಹೊಸ ರಸ್ತೆ ನಿಧಾನಕ್ಕೆ ಕುಸಿಯುತ್ತ ಹೋಗಿದೆ. ಮುಂದೆ ಅನಾಹುತ ಆಗದಂತೆ ತಡೆಯಲು ಕಾಮಗಾರಿ ಶುರುವಾದರೂ, ಆಗಾಗ ಮಳೆ ಬಂದು ತೊಂದರೆ ಆಗುತ್ತಿದೆ. ನೀರು ಹರಿಯಲು ಹೊಸ ಮಾರ್ಗ ನಿರ್ಮಾಣ ಕಾಮಗಾರಿ ಆರಂಭ ಮಾಡಲಾಗಿದೆ. ಆದರೆ ನೀರಿನ ರಭಸಕ್ಕೆ ಕಾಮಗಾರಿ ಕೂಡಾ ವಿಳಂಬ ಆಗುತ್ತಿದೆ. ಇದನ್ನೂ ಓದಿ: ಎರಡನೇ ಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ