ಧಾರವಾಡ: ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಭಾಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲೆಯ ಡಿಸಿ ದೀಪಾ ಚೋಳನ್ ಅವರು ಚರಂಡಿ ಕ್ಲೀನ್ ಮಾಡಿ ಮಾದರಿಯಾಗಿದ್ದಾರೆ.
ಜಿಲ್ಲೆಯ ಉಪ್ಪಿನಬೆಟಗೇರಿಯ ಮೇದಾರ ಓಣಿಯಲ್ಲಿ ಜಿಲ್ಲಾಧಿಕಾರಿ ದೀಪಾ ಅವರು ಗ್ರಾಮ ವಾಸ್ತವ್ಯ ನಡೆಸಿದ್ದರು. ತಮ್ಮ ಗ್ರಾಮ ವಾಸ್ತವ್ಯದ ವೇಳೆ ಜನರ ಸಮಸ್ಯೆ ಆಲಿಸಿದ ದೀಪಾ, ಸ್ವಚ್ಛತೆ ಬಗ್ಗೆಯೂ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಗ್ರಾಮದಲ್ಲಿ ಸ್ಪಚ್ಛತಾ ಕಾರ್ಯ ನಡೆಸಲು ಪೊರಕೆ ಹಿಡಿದು ಕಸಗೂಡಿಸಲು ಬಂದಾಗ ತುಂಬಿ ಹೋಗಿದ್ದ ಚರಂಡಿ ನೋಡಿ ತಾವೇ ಸಲಾಕೆ ಹಿಡಿದರು.
ಗ್ರಾಮಸ್ಥರು ಮೂಲಭೂತ ಸೌಲಭ್ಯಗಳೊಂದಿಗೆ ಹಳ್ಳಿಯ ಪ್ರಮುಖ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಸೂಚಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಅಲ್ಲದೇ ಗ್ರಾಮದಲ್ಲಿ ಶೌಚಾಲಯ ಹಾಗೂ ರಸ್ತೆಗಳ ಬಗ್ಗೆಯೂ ದೀಪಾ ಅವರು ಪರಿಶೀಲನೆ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv