ಧಾರವಾಡ: ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ. ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.
Advertisement
ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿ ಆಗಿದೆ. ಆದರೆ ಇದೇ ಸಮಯದಲ್ಲಿ ಸೇನಾ ಭರ್ತಿಯ ದೈಹಿಕ ಪರೀಕ್ಷೆ ಇವೆ. ಕರ್ನಾಟಕ ವಿವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆ ಬರೆಯಬೇಕೋ ಅಥವಾ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ವಿವಿಯ ಮೌಲ್ಯ ಮಾಪನ ಕುಲಸಚಿವರಿಗೆ ಮನವಿ ಕೊಟ್ಟು ಸೆಪ್ಟೆಂಬರ್ 20ರ ನಂತರ ಪದವಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ
Advertisement
Advertisement
ಕರ್ನಾಟಕ ವಿವಿ ಕೂಡಾ ಈ ಹಿಂದೆ ಇದೇ ವಿಚಾರವಾಗಿ ಕೊಟ್ಟ ಅರ್ಜಿಯನ್ನು ಆಲಿಸಿದೆ. ಆದರೆ 2 ದಿನ ಮಾತ್ರ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಆದರೆ ದಿನ ಕಳೆದಂತೆ ಹೆಚ್ಚು ಮನವಿ ಬರುತ್ತಿರುವುದರಿಂದ ಸಮಸ್ಯೆ ಆರಂಭವಾಗಿದೆ. ಎರಡು ಅಥವಾ ಮೂರು ದಿನ ಪರೀಕ್ಷೆ ಮುಂದೂಡಬಹುದು. ಆದರೆ 20 ದಿನ ಪರೀಕ್ಷೆ ದಿನಾಂಕ ಬದಲಾವಣೆ ಮಾಡುವುದು ಕಷ್ಟ ಎಂದು ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ಕೃಷ್ಣ ಮೂರ್ತಿ ಹೇಳ್ತಾರೆ. ಅದರಲ್ಲಿ ಮತ್ತೆ ಬೇರೆ ಸಮಸ್ಯೆ ಬಂದರೆ ಅದಕ್ಕೂ ನಾವು ಪರೀಕ್ಷೆ ಸಮಯ ಬದಲಾವಣೆ ಮಾಡಬೇಕಾಗಿದ್ದು, ಈ ಬಗ್ಗೆ ಕುಲಪತಿಗಳ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಗ್ರಾಮ ಈಗ ಯೂಟ್ಯೂಬ್ ಹಬ್ – ಬೀದಿ ಬೀದಿಯಲ್ಲೂ ಸಿಗ್ತಾರೆ ಕ್ರಿಯೇಟರ್‌ಗಳು